ನಾರಾವಿ : ಕಾರ್ಕಳ ಗುರುವಾಯನಕೆರೆ ರಸ್ತೆಯ ರಾಜ್ಯ ಹೆದ್ದಾರಿಯಾಗಿರುತ್ತದೆ. ತೆಂಗು ಕಂಗುಗಳ, ಕಾಡು ಮೇಡು ಗುಡ್ಡೆ ತೊರೆಯ ಬದಿಯಲ್ಲಿರುವ, ಗುರುವಾಯನಕೆರೆಯಿಂದ 24 ಕೀ.ಮೀ ದೂರದಲ್ಲಿ ನಾರಾವಿ ಎಂಬ ಪುಟ್ಟ ಊರು ಪ್ರಕೃತಿಯ ರಮಣಿಯ ಮಡಿಲಿನಲ್ಲಿ ಕಂಗೊಳಿಸುತ್ತಿದೆ. ಈ ಗ್ರಾಮ ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಮತ್ತು ವಿಸ್ತೀರ್ಣವುಳ್ಳ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅತೀ ಹೆಚ್ಚು ವಿಸ್ತೀರ್ಣವಾದ ಪ್ರದೇಶ ಉಳ್ಳ ರಕ್ಷಿತಾರಣ್ಯ ಪ್ರದೇಶ ಈ ಭಾಗದ ನಾಗರಿಕರ ಹಲವು ದಶಮಾನಗಳ ಬೇಡಿಕೆಯಾದ ಪೊಲೀಸ್ ಠಾಣೆ ನಿರ್ಮಾಣದ ಕನಸು, ಕೇವಲ ‘ಬೇಡಿಕೆ’ ಯಲ್ಲಿ ಮಾತ್ರ ಉಳಿದಿದೆ. ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗಳ ಕಾರ್ಯೋನ್ಮುಖವಾಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ನಾರಾವಿಯಲ್ಲಿ ಇದು ಎಂಬಲ್ಲಿ ನಕ್ಸಲರ ಎನ್‌ಕೌಂಟರ್, ನಡೆದಾಗ ಅಧಿವೇಶನದಲ್ಲಿ, ಆಗಿನ ಬೆಳ್ತಂಗಡಿ ಶಾಸಕರು ವಿಷಯ ಪ್ರಾಸ್ತಪಿಸಿದಾಗ 6 ತಿಂಗಳಲ್ಲಿ ಪೊಲೀಸ್ ಠಾಣೆ ಪ್ರಾರಂಭಿಸಿಯೇ ಸಿದ್ಧ ಎಂದು ಅಂದಿನ ಗೃಹಸಚಿವರು ವಾಗ್ದಾನ ನೀಡಿದ್ದರು. ಆದರೆ ನಿರೀಕ್ಷೆ ಹುಸಿಯಾಗಿಯೇ ಉಳಿಯಿತು.
ಈ ನಾರಾವಿಯ ಅರ್ಧ ಭಾಗ ವೇಣೂರು ಪೊಲೀಸ್ ಠಾಣೆಯ ‘ಸುರ್ಪದಿಯಲ್ಲಿದ್ದರೆ’ ಉಳಿದ ಅರ್ಧ ಭಾಗ ಕಾರ್ಕಳ ಪೊಲೀಸ್ ಠಾಣೆ ಸೇರುತ್ತದೆ. ಯಾವುದೇ ಘಟನೆ ನಡೆದಾಗ ನಾರಾವಿಯಿಂದ 24 ಕಿ.ಮೀ ದೂರದ ವೇಣೂರು ಪೊಲೀಸ್ ಠಾಣೆ ತೆರಳಬೇಕು. ಈ ಪ್ರದೇಶದಲ್ಲಿ ನಿರಂತರ ಸರಕಾರಿ ರಕ್ಷಿತಾರಣ್ಯ ಹಾಳು ಮಾಡಿ ಅಕ್ರಮ ದಂಧೆ, ಅಕ್ರಮ ಕಪ್ಪುಕಲ್ಲು ಗಣಿಗಾರಿಕೆ, ನಿರಂತರ ಮರಗಳ್ಳತನ, ಪೆರಾಡಿ ಮರೋಡಿಯಲ್ಲಿ ನಿರಂತರ ಗೊ- ಕಳ್ಳತನ ಮುಂತಾದ ಅಕ್ರಮ ಚಟುವಟಿಕೆಗಳು ನಡೆಯುತ್ತದೆ
ಇದಕ್ಕೆ ರಾಜಕೀಯ ವಕ್ತಿಗಳ ಕೃಪಾಕಟಾಕ್ಷ ಇದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ. ಬಹುಷ ಇದೇ ಕಾರಣವಿರಬಹುದೋ ಏನೋ, ಪೋಲಿಸ್ ಠಾಣೆ ನಿರ್ಮಿಸಲು ಹಿಂದೇಟು ಹಾಕುತ್ತಿರೋದು ಅನ್ನೋದು ಊರವರ ಆಪಾದನೆ. ಈ ಭಾಗದಲ್ಲಿ ಪಲ್ಲುಣಿ ನದಿ ತೀರದ ಪ್ರದೇಶ, ಮತ್ತು ಅನೇಕ ನದಿ ತೊರೆಗಳು ಹರಿಯುತ್ತಿದೆ. ಹಾಗಾಗಿ ಇಲ್ಲಿ ಮರಳ ಮಾಫಿಯ ನಿರಂತರ ನಡೆಯುತ್ತಿದೆ.
ಅನೇಕ ಸಲ ಇಲ್ಲಿನ ನಾಗರಿಕರು ವೇಣೂರು ಪೋಲಿಸರಿಗೆ ಗುಪ್ತ ಮಾಹಿತಿ ನೀಡಿದಾಗ ಪೊಲೀಸರಿಗೆ ಈ ಜಾಗಕ್ಕೆ ತಲುಪಲು ತಡವಾಗುತ್ತದೆ. ಅಷ್ಟರೊಳಗೆ ಕಿಡಿಗೇಡಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಮರಗಳ್ಳತನ ನಡೆದಾಗ ಅರಣ್ಯಾಧಿಕಾರಿಯನ್ನು ವಾಹನ ಅಫಘಾತ ನಡೆಸಿ ಕೊಲೆಯತ್ನ ನಡೆದಾಗ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿಯದೆ ವೇಣೂರು ಆರಣ್ಯಧಿಕಾರಿ ಕಾನೂನು ಕ್ರಮ ಕೈಗೊಂಡಿದ್ದರು. ಆದರೆ ಈ ಅಧಿಕಾರಿ ಕೇವಲ 3 ತಿಂಗಳಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡಲಾಯಿತು. ಅನಿವಾರ್ಯ ಸಂದರ್ಭದಲ್ಲಿ ಶೀರ್ಘ ವೇಣೂರು ಪೋಲಿಸ್ ಠಾಣೆ ತೆರಳುವ ರಸ್ತೆಗಳ ಸ್ಥಿತಿಯೂ ಶೋಚನೀಯ.
ನಾರವಿ ವೇಣೂರು ರಸ್ತೆ, ಪೆರಾಡಿ ಕಾಶಿಘಟ್ಟ ಪೇರಂದಡ್ಕ ಮುಂತಾದ ರಸ್ತೆಗಳು ಈ ಮಳೆಗಾಲದಲ್ಲಿ ಕುಲಗೆಟ್ಟು ಹೋಗಿವೆ. ಅಪಘಾತ ನಡೆದಾಗ, ಇತರ ಸಂದರ್ಭದಲ್ಲಿ ಪೋಲಿಸ್ ಇಲಾಖೆಗೆ ಸಂಪರ್ಕಿಸಲು ಸಾಧ್ಯವಾಗದ ಕಾರಣ ಈ ಭಾಗದ ಜನರಿಗೆ ಸ್ಥಳೀಯವಾಗಿ ಪೊಲೀಸ್ ರಕ್ಷಕರು ಬೇಕಾಗಿದ್ದಾರೆ. ನಾರಾವಿಗೆ ಪೂರ್ಣಾವಧಿ ಪೊಲೀಸ್ ಠಾಣೆ ನಿರ್ಮಿಸಿ, ಬಹುಕಾಲದ ಬೇಡಿಕೆಯೊಂದನ್ನು ಪೂರೈಸಬೇಕಾಗಿದೆ. ಇಲ್ಲಿರುವ ಜನರ ಮತ್ತು ದಟ್ಟ ನಿಬಿಡ ಕಾಡನ್ನು ಕಾಯಬೇಕಿದೆ.
ವರದಿ: ಕೆ ಎಸ್ ಕುಲಾಲ್ ಬೆಳ್ತಂಗಡಿ

