ವಿಶೇಷ ಚೇತನವುಳ್ಳ ವ್ಯಕ್ತಿಗಳೊಂದಿಗೆ ಸಂವಾದ

0
5


ಸರಕಾರಿ ಪ್ರೌಢಶಾಲೆ, ನಾರ್ಶ ಮೈದಾನ ಇಲ್ಲಿ ಸಂಭ್ರಮ ಶನಿವಾರದ ಪ್ರಯುಕ್ತ ವಿಶೇಷ ಚೇತನವುಳ್ಳ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಅಜಯ್ ಇವರನ್ನು ಆಹ್ವಾನಿಸಲಾಗಿತ್ತು. ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣರ ನೇರಳಕಟ್ಟೆಯವರು ಅಜಯ್ ಇವರನ್ನು ಪ್ರೀತಿಯಿಂದ ಸ್ವಾಗತಿಸಿ ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದರೂ ಕೂಡ ತನ್ನ ಪ್ರೌಢಶಾಲಾ ಜೀವನದಲ್ಲಿ ಶಾಲೆಯನ್ನು ಬಹಳ ಪ್ರೀತಿಯಿಂದ ಕಾಳಜಿಯಿಂದ ಯಾವ ರೀತಿ ನೋಡಿಕೊಂಡಿದ್ದರು ಎಂಬುದರ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು ಅವರ ಅಕ್ಷರ ಬರವಣಿಗೆಯ ಬಗ್ಗೆ ಹಾಗೂ ಯಾವುದೇ ಪೂರ್ವ ತಯಾರಿ ಇಲ್ಲದೆ ಮಾತನಾಡುವ ಕೌಶಲ್ಯದ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು . ವಿಶೇಷ ಚೇತನರ ವಿಶೇಷ ಸಾಮರ್ಥ್ಯಗಳು ಸರಕಾರದಿಂದ ದೊರೆಯುವ ಸೌಲಭ್ಯಗಳು ವಿಶೇಷ ಚೇತನರನ್ನು ಯಾವ ರೀತಿಯಾಗಿ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಅಜಯ್ ಇವರು ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ದ್ವಿತೀಯ ಪಿಯುಸಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಇವರು ಮಾತನಾಡಿ ಸರಕಾರಿ ಪ್ರೌಢಶಾಲೆ ಯಲ್ಲಿ ತಾನು ಪಡೆದುಕೊಂಡಂತಹ ಅನುಭವಗಳು ಶಿಕ್ಷಕರು ತೋರಿದ ಪ್ರೀತಿ ಕಾಳಜಿ ಹಾಗೂ ಶಾಲೆಯನ್ನು ತಾನು ಯಾವ ರೀತಿಯಾಗಿ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೆ ಎಂಬುದನ್ನು ತನ್ನ ಮಾತುಗಳಲ್ಲಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಕ್ಷಮಾ ಕುಮಾರಿ ಸ್ವಾಗತಿಸಿ ಭಾರತಿ ಸಿ. ವಂದಿಸಿದರು. ಶುಭರವರು ನಿರ್ವಹಣೆ ಮಾಡಿದರು. ಅಬ್ದುಲ್ ರಫೀಕ್ ಸರ್ , ಸವಿತಾ ಮೇಡಂ, ಅನಿಲ್ ಸರ್ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here