ಸಚಿವ ಸ್ಥಾನಕ್ಕಾಗಿ ಲಾಬಿ ಬೇಡ’ – ಡಿಕೆ ಶಿವಕುಮಾರ್‌ಗೆ ಹೈಕಮಾಂಡ್ ಎಚ್ಚರಿಕೆ

0
8

ಬೆಂಗಳೂರು: ಡಿಕೆ ಶಿವಕುಮಾರ್  ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಗಳು ಜೋರಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೇ ಜೂನ್ 27ರಂದು ದೆಹಲಿಗೆ ಭೇಟಿ ನೀಡಿ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದ್ರೆ, ಇದೇ ಸಂಪುಟ ವಿಸ್ತರಣೆ ವಿಚಾರಕ್ಕೆ ಹೈಕಮಾಂಡ್​​​ ಜತೆ ಚರ್ಚಿಸುವ ಮುನ್ನವೇ ದೆಹಲಿಯಿಂದ ಡಿಕೆ ಶಿವಕುಮಾರ್​​​ಗೆ ಮಹತ್ವದ ಸೂಚನೆ ಬಂದಿದೆ. ಸಚಿವ ಸ್ಥಾನಕ್ಕಾಗಿ ಲಾಬಿಗೆ ಅವಕಾಶ ಕೊಡಬೇಡಿ ಎಂದ ಡಿಕೆ ಶಿವಕುಮಾರ್ ಅವರಗೆ ಹೈಕಮಾಂಡ್​​​​ ದೂರವಾಣಿ ಕರೆ ಮಾಡಿ ಸೂಚಿಸಿದೆ.

ಸಚಿವ ಸ್ಥಾನ ನೀಡಬೇಕೆಂದು ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು ಪಟ್ಟು ಹಿಡಿದಿದ್ದು, ಈ ಸಂಬಂಧ ದೆಹಲಿಗೆ ತೆರಳಿ ಭಾರೀ ಲಾಬಿ ನಡೆಸಿದ್ದಾರೆ. ಇನ್ನೊಂದೆಡೆ ತಮ್ಮ ಶಾಸಕರನ್ನು ಮಂತ್ರಿ ಮಾಡಬೇಕೆಂದು ಕ್ಷೇತ್ರಗಳಲ್ಲಿ ಪ್ರತಿಭಟನೆಗಳು ಸಹ ನಡೆದಿವೆ. ಇನ್ನು ಸ್ವಾಮೀಜಿ, ಸಮುದಾಯದ ಮಠಾಧೀಶರು ಸೇರಿದಂತೆ ವಿವಿಧ ಮೂಲಗಲಿಂದ ಮಂತ್ರಿ ಸ್ಥಾನಕ್ಕೆ ಒತ್ತಡ ಹೇರುವ ಪ್ರಯತ್ನಗಳು ನಡೆದಿವೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಹೈಕಮಾಂಡ್, ಯಾವುದೇ ಕಾರಣಕ್ಕೂ ಇದು ತಾರಕ್ಕೆ ಹೋಗಬಾರದು ಎಂದು ಎಚ್ಚೆತ್ತುಕೊಂಡು ಕೂಡಲೇ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಸಚಿವ ಸ್ಥಾನಕ್ಕಾಗಿ ಲಾಬಿಗೆ ಅವಕಾಶ ನೀಡಬೇಡಿ. ಯಾವುದೇ ರೀತಿಯ ಲಾಬಿಯನ್ನು ಸಹಿಸಿಕೊಳ್ಳುವುದಿಲ್ಲ. ಸಂಪುಟ ವಿಸ್ತರಣೆ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತೆ ಎಂದು ಖಡಕ್ ಆಗಿ ಹೇಳಿದೆ.

LEAVE A REPLY

Please enter your comment!
Please enter your name here