ಯಕ್ಷಗಾನ ಕಲಾರಂಗಕ್ಕೆ ‘ಸಾಂಸ್ಕೃತಿಕ ಏಕೀಕರಣ’ ಪ್ರಶಸ್ತಿ

0
13

ಉಡುಪಿ : 52 ವರ್ಷಗಳಿಂದ ಕಲೆ, ಶಿಕ್ಷಣ, ಸಂಸ್ಕøತಿ ಸಮಾಜಪರ ಕೆಲಸ ಮಾಡುವ ಯಕ್ಷಗಾನ ಕಲಾರಂಗಕ್ಕೆ ಅಷ್ಟೇ ಹಳೆಯದಾದ ಸಂಸ್ಥೆ ಕಾಂತಾವರ ಕನ್ನಡ ಸಂಘವು ಕೆ. ಬಿ. ಜಿನರಾಜ್ ಹೆಗ್ಡೆ ನೆನಪಿನಲ್ಲಿ ನೀಡುವ ಸಾಂಸ್ಕøತಿಕ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನವೆಂಬರ್ ಒಂದನೇ ತಾರಿಕು ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಸಂಘದ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಶಸ್ತಿ ಸ್ವೀಕರಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್, ಯು. ವಿಶ್ವನಾಥ ಶೆಣೈ, ನಾರಾಯಣ ಎಂ. ಹೆಗಡೆ, ಮರ್ಣೆ ಉಮೇಶ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.