ಕನ್ನಡ ಹಾಗೂ ತುಳು ಭಾಷೆಯ ಬರಹಗಾರರಿಗೆ ತಮ್ಮ ಸಾಹಿತ್ಯ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ಕಾವ್ಯದ ಬೆಳಕಿನಿಂದ ದೀಪಾವಳಿಯ ರಂಗು’ ಎಂಬ ಶೀರ್ಷಿಕೆಯಡಿ ಸ್ವರಚಿತ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸಮಸ್ತ ಕನ್ನಡ ಹಾಗೂ ತುಳು ಬರಹಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮದೇ ಸ್ವಂತ ಕವನವನ್ನು ರಚಿಸಿ ಕಳುಹಿಸಬೇಕು. ಇತರರ ಕವನಗಳನ್ನು ನಕಲು ಮಾಡುವಂತಿಲ್ಲ. ಕವನವು ಗರಿಷ್ಠ 16ರಿಂದ 20 ಸಾಲುಗಳ ಮಿತಿಯೊಳಗಿರಬೇಕು.
ಕವನವನ್ನು ಕನ್ನಡ ಅಥವಾ ತುಳು ಭಾಷೆಯಲ್ಲಿ ರಚಿಸಿ, ಟೈಪ್ ಮಾಡಿ ವಾಟ್ಸ್ಆ್ಯಪ್ ಮೂಲಕ ಕಳುಹಿಸಬಹುದು. ಕವನದ ಕೊನೆಯಲ್ಲಿ ಕವಿಯ ಹೆಸರು, ಊರು ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
ಕವನಗಳನ್ನು ಕಳುಹಿಸಲು ನವೆಂಬರ್ 11, 2026ರಂದು ರಾತ್ರಿ 11 ಗಂಟೆ ಕೊನೆಯ ದಿನಾಂಕವಾಗಿದೆ.
ಆಸಕ್ತರು ತಮ್ಮ ಸ್ವರಚಿತ ಕವನಗಳನ್ನು 9449115303 ವಾಟ್ಸ್ಆ್ಯಪ್ ಸಂಖ್ಯೆಗೆ ಕಳುಹಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಕಾವ್ಯದ ಮೆರುಗು ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

