ಚಿಕ್ಕಮಗಳೂರಲ್ಲಿ ವಕೀಲರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಸೈಬರ್ ಖದೀಮರು ; ₹99,584 ಲೂಟಿ !

0
18

ಚಿಕ್ಕಮಗಳೂರru : ಕಾಫಿನಾಡಿನಲ್ಲಿ ಸೈಬರ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಾರಿ ಕಾನೂನು ಅರಿವಿರುವ ವಕೀಲರೇ ವಂಚಕರ ಬಲೆಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ನಗರದ ವಕೀಲರೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹99,584 ಹಣವನ್ನು ಸೈಬರ್ ಖದೀಮರು ಎಗರಿಸಿದ್ದಾರೆ.

ನಗರದ ವಕೀಲರೊಬ್ಬರು ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ₹4.14 ಲಕ್ಷ ಸಾಲ ಪಡೆದಿದ್ದರು. ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಅವರ ಖಾತೆಯಿಂದ ₹99,584 ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.

ವಂಚಕರು ಆಮಿಷವೊಡ್ಡಿ ಅಥವಾ ಸಂಶಯಾಸ್ಪದ ಲಿಂಕ್ ಕಳುಹಿಸುವ ಮೂಲಕ ಬ್ಯಾಂಕ್ ವಿವರಗಳನ್ನು ಪಡೆದು ಹಣ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ವಕೀಲರ ಗಮನಕ್ಕೆ ಬಾರದಂತೆ ಹಣ ವರ್ಗಾವಣೆ ನಡೆದಿದ್ದು, ಮೊಬೈಲ್‌ಗೆ ಹಣ ಕಡಿತದ ಸಂದೇಶ ಬಂದ ತಕ್ಷಣ ಅವರು ಎಚ್ಚೆತ್ತು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಚಿಕ್ಕಮಗಳೂರಿನ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾರ್ವಜನಿಕರಿಗೆ ಪೊಲೀಸ್ ಎಚ್ಚರಿಕೆ

  • ಸೈಬರ್ ವಂಚನೆಗೊಳಗಾದ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ.
  • ಅಥವಾ National Cyber Crime Portal ಮೂಲಕ ದೂರು ದಾಖಲಿಸಿ.
  • ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುವವರೊಂದಿಗೆ OTP, PIN ಅಥವಾ ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ.
  • ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ.
  • ಉಚಿತ ಉಡುಗೊರೆ, ಹೆಚ್ಚಿನ ಲಾಭದ ಆಮಿಷಗಳಿಗೆ ಮರುಳಾಗಬೇಡಿ.

LEAVE A REPLY

Please enter your comment!
Please enter your name here