‘D-ಜೋ-D ಕೋಸ್ಟಲ್ ಕರ್ನಾಟಕ’ ಜೋಡಿ ನೃತ್ಯ ಸ್ಪರ್ಧೆ: ನ.29ರಂದು ಅಂತಿಮ ಸುತ್ತು

0
7

10ರಿಂದ 16 ವರ್ಷದೊಳಗಿನವರಿಗೆ ಅವಕಾಶ; ನ.1ರೊಳಗೆ ನೃತ್ಯ ವಿಡಿಯೋ ಕಳುಹಿಸಲು ಸೂಚನೆ

ಏನೆಕಲ್ : ಕಲಾಮಾಯೆ ಕಲ್ಚರಲ್ ಎಜುಕೇಶನ್ ಇನ್‌ಸ್ಟಿಟ್ಯೂಟ್ (ರಿ.), ಏನೆಕಲ್ ವತಿಯಿಂದ ‘D-ಜೋ-D ಕೋಸ್ಟಲ್ ಕರ್ನಾಟಕ’ ಜೋಡಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 10ರಿಂದ 16 ವರ್ಷದೊಳಗಿನ ಮಕ್ಕಳಿಗೆ ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದ್ದು, ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದೆ.

ಸ್ಪರ್ಧಿಗಳು ಯಾವುದೇ ಭಾಷೆಯ, ಯಾವುದೇ ಶೈಲಿಯ ನೃತ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊದಲ ಸುತ್ತಿನಲ್ಲಿ ಭಾಗವಹಿಸಲು ಜೋಡಿ ಸ್ಪರ್ಧಿಗಳು ಒಂದೂವರೆ ನಿಮಿಷದ ನೃತ್ಯ ವಿಡಿಯೋವನ್ನು 2026ರ ನವೆಂಬರ್ 1ರೊಳಗೆ ಕಳುಹಿಸಿಕೊಡಬೇಕು. ವಿಡಿಯೋದಲ್ಲಿ ಯಾವುದೇ ತಾಂತ್ರಿಕ ಸಂಕಲನಕ್ಕೆ ಅವಕಾಶವಿರುವುದಿಲ್ಲ.

ಮೊದಲ ಸುತ್ತಿನಲ್ಲಿ ಭಾಗವಹಿಸಿದ ಸ್ಪರ್ಧಿಗಳ ಪೈಕಿ 10 ಜೋಡಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಅಂತಿಮ ಸ್ಪರ್ಧೆಯು 2026ರ ನವೆಂಬರ್ 29ರ ಭಾನುವಾರ ಸಂಜೆ 6.45ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಏನೆಕಲ್‌ನ ಅರ್ಪಣಾ ಕ್ರೀಡಾಂಗಣದ ತೆರೆದ ವೇದಿಕೆಯಲ್ಲಿ ಸುಸಜ್ಜಿತ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯೊಂದಿಗೆ ನಡೆಯಲಿದೆ.

ಅಂತಿಮ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಜೋಡಿಗಳಿಗೆ ‘D-ಜೋ-D ಕೋಸ್ಟಲ್ ಕರ್ನಾಟಕ’ ಟ್ರೋಫಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ. ಅಂತಿಮ ಸುತ್ತಿನಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಸ್ಮರಣಿಕೆ ಹಾಗೂ ಪ್ರಮಾಣಪತ್ರ ವಿತರಿಸಲಾಗುತ್ತದೆ.

ಸ್ಪರ್ಧಿಗಳ ವಯಸ್ಸಿನ ದೃಢೀಕರಣಕ್ಕಾಗಿ ಜನ್ಮ ದಿನಾಂಕದ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮಕ್ಕಳಲ್ಲಿರುವ ನೃತ್ಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಕಲೆಯ ಮೂಲಕ ಒಗ್ಗಟ್ಟನ್ನು ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಕಲಾಮಾಯೆ ಅವರನ್ನು 9686714517 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

‘ಬನ್ನಿ, ಒಗ್ಗಟ್ಟಿನ ಕಲಾ ಕೈಂಕರ್ಯದಲ್ಲಿ ನಾವೆಲ್ಲರೂ ಭಾಗಿಗಳಾಗೋಣ. ಶುದ್ಧ ಮತ್ತು ಆರೋಗ್ಯಕರ ನೃತ್ಯ ನಿಮ್ಮದಾಗಲಿ’ ಎಂದು ಆಯೋಜಕರು ಕರೆ ನೀಡಿದ್ದಾರೆ.