ಮೂಲ್ಕಿ : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ ಇದರ 2026–27ನೇ ಸಾಲಿನ ತಿರುಗಾಟದಲ್ಲಿ ನೂತನ ತುಳು ಯಕ್ಷಗಾನ ಪ್ರಸಂಗವೊಂದು ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
‘ಗಗ್ಗರ’ ಖ್ಯಾತಿಯ ಯಶಸ್ವಿ ಯಕ್ಷಗಾನ ಪ್ರಸಂಗಗಳ ಕರ್ತೃ ರಮೇಶ್ ಸುವರ್ಣ ಅರುವ ಅವರ ವಿರಚಿತ ಹಾಗೂ ‘ರಂಗ ಮಾಣಿಕ್ಯ’ ಸುಬ್ಬು ಸಂಟ್ಯಾರ್ ಅವರ ಪದ್ಯ ರಚನೆಯ ನೂತನ ಕಲಾಕುಸುಮ ‘ಬ್ರಹ್ಮ ಕಲಶಾಭಿಷೇಕ’ ತುಳು ಯಕ್ಷಗಾನ ಪ್ರಸಂಗವು ಮೇಳದ ಮುಂಬರುವ ತಿರುಗಾಟದ ವಿಶೇಷ ಆಕರ್ಷಣೆಯಾಗಲಿದೆ.
ತುಳು ಭಾಷೆ, ಯಕ್ಷಗಾನ ಪರಂಪರೆ ಹಾಗೂ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಒಳಗೊಂಡಿರುವ ಈ ನೂತನ ಪ್ರಸಂಗದ ಬಿಡುಗಡೆ ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಯಕ್ಷಗಾನಾಸಕ್ತರು ಹಾಗೂ ತುಳು ಕಲಾಭಿಮಾನಿಗಳಲ್ಲಿ ಈ ನೂತನ ಪ್ರಸಂಗ ಕುತೂಹಲ ಮೂಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9620174862, 7353544418

