ದೈಗೋಳಿ : ಉಚಿತ ಪ್ರಕೃತಿ ಚಿಕಿತ್ಸೆ, ಯೋಗ ಶಿಬಿರ ಹಾಗೂ ನೇತ್ರ ತಪಾಸಣೆ ಶಿಬಿರ

0
13

ಮಂಜೇಶ್ವರ,ದೈಗೋಳಿ : ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ ನರಿoಗಾನ, ದೇರಳಕಟ್ಟೆ ಹಾಗೂ ಜ್ಞಾನೋದಯ ಸಮಾಜ (ರಿ.)ದೈಗೋಳಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೈಗೋಳಿಯ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 27 ಆದಿತ್ಯವಾರದಂದು ರಾಷ್ಟ್ರೀಯ ಪೌಸ್ಟಿಕ ಮಾಸಾಚರಣೆ 2026ರ ಅಂಗವಾಗಿ ಉಚಿತ ಪ್ರಕೃತಿ ಚಿಕಿತ್ಸೆ, ಯೋಗ ಶಿಬಿರ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರವು ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ಜರಗಿತು.

ಶಿಬಿರರವನ್ನು ಜ್ಞಾನೋದಯ ಸಮಾಜದ ಅಧ್ಯಕ್ಷ ಹಾಗೂ ದೈಗೋಳಿ ಶ್ರೀ ಗಣೇಶೋತ್ಸವದ ಗೌರವಾಧ್ಯಕ್ಷರಾದ ಪಿ.ಶಿವರಾಮ ಭಟ್ ಮಡ್ವ ದೀಪಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೀoಜ ಪಂಚಾಯತ್ ನ ಸದಸ್ಯರಾದ ಶಾಂತ ಕುಮಾರಿ ತಂಬಿಲಕೋಡಿ ಭಾಗವಹಿಸಿದರು.ದೈಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ತಿಲಕ್ ಪ್ರಸಾದ್ ಅಡೆಕಳಕಟ್ಟೆ, ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಸತ್ಯನಾರಾಯಣ ಭಟ್ ಪಜ್ವ, ಜ್ಞಾನೋದಯ ಸಮಾಜದ ಕೋಶಾಧಿಕಾರಿ ಬಿ. ವಿ. ರಾಜಗೋಪಾಲ್ ದೈಗೋಳಿ,ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರುಗಳಾದ ಡಾ. ವಿನಯ ಕುಮಾರ.ಟಿ, ಡಾ. ಅಜಿತ್ ಕೆ, ಡಾ.ಸಂಗೀತಾ ಲಕ್ಷ್ಮೀ,ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕಣ್ಣಿನ ವೈದ್ಯರಾದ ಡಾ.ಲಿನಿನ್ ವರ್ಗಿಸ್ ಉಪಸ್ಥಿತರಿದ್ದರು.

ಆರೋಗ್ಯದ ಬಗ್ಗೆ ಮಾಹಿತಿಯನ್ನು ಡಾ. ವಿನಯ ಕುಮಾರ ಟಿ ನೀಡಿದರು. ಶಿಬಿರದಲ್ಲಿಉಚಿತ ವಾಗಿ ರಕ್ತದೊತ್ತಡ ತಪಾಸಣೆ ,ರಕ್ತದಲ್ಲಿನ ಸಕ್ಕರೆ ಪ್ರಮಾಣ ತಪಾಸಣೆ, ನೇತ್ರ ತಪಾಸಣೆ ಹಾಗೂ ಉಚಿತ ಅರೋಗ್ಯ ಸೇವೆಗಳಾದ ಸಾಮಾನ್ಯ ವೈದ್ಯಕೀಯ ಸಲಹೆ, ಆಹಾರ ಪೌಸ್ಟಿಕ ಸಲಹೆ, ಮಸಾಜ್ ಚಿಕಿತ್ಸೆ,ಆಕ್ಯುಪ್ರೆಷರ್ ಚಿಕಿತ್ಸೆ, ಯೋಗ ಚಿಕಿತ್ಸೆ ಹಾಗೂ ಮಾರ್ಗದರ್ಶನ ನಡೆಯಿತು.

ಸುಮಾರು 85 ಮಂದಿ ಈ ಶಿಬಿರದ ಪ್ರಯೋಜನ ಪಡೆದರು. ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಧಾನ ಕಾರ್ಯದರ್ಶಿ ಮಾಧವ ಶೆಟ್ಟಿಗಾರ್ ದೈಗೋಳಿ ಸ್ವಾಗತಿಸಿ, ಜ್ಞಾನೋದಯ ಸಮಾಜದ ಪ್ರಧಾನ ಕಾರ್ಯದರ್ಶಿ ಸುಧೀರ್ ರಂಜನ್ ದೈಗೋಳಿ ವಂದಿಸಿದರು.