
ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಜಯಂಟ್ಸ್ ಕೇರ್ ಫೌಂಡೇಶನ್ ಇದರ ವತಿಯಿಂದ ಜಯಂಟ್ಸ್ ಸಪ್ತಾಹ ಸಮಾರೋಪ ಸಮಾರಂಭ ಜಯ0ಟ್ಸ್ ಗ್ರೇಟ್ ಡೆ ಕಾರ್ಯಕ್ರಮ ಬ್ರಹ್ಮಾವರ ಸಿಟಿ ಸೆಂಟರ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭಾರತೀಯ ಮೂಲದ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಬ್ರಹ್ಮಾವರದ ಘಟಕ ಈ ವರ್ಷದಲ್ಲಿ 74 ವಿವಿಧ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಮನೆ ಮಾತಾಗಿದೆ. ಉಡುಪಿಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಲು ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಫುಡ್ ಸ್ಟ್ರೀಟ್ ಮಾಡುವ ವಿನೂತನ ಯೋಜನಾ ಮನವಿ ಬಗ್ಗೆ ಗಮನಹರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿ ಶುಭ ಹಾರೈಸಿದರು. ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಕೇಂದ್ರ ಸಮಿತಿ ಸದಸ್ಯ ದಿನಕರ್ ಕೆ ಅಮೀನ್, ಬ್ರಹ್ಮಾವರದ ಘಟಕ ಕಳೆದ ಹಲವಾರು ವರ್ಷಗಳಿಂದ ಅನೇಕ ರೀತಿಯ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಈ ಸಂಸ್ಥೆ ವತಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಯೂನಿಟ್ ಡೈರೆಕ್ಟರ್ ಸುಂದರ್ ಪೂಜಾರಿ ಮೂಡುಕುಕ್ಕುಡೆ, ಜೆಂಟ್ಸ್ ಫೆಡರೇಶನ್ ಉಪಾಧ್ಯಕ್ಷ ದೀಪಕ್ ಬೋಜ್ ಶುಭ ಹಾರೈಸಿದರು.
ಜೆಂಟ್ಸ್ ಗ್ರೂಪ್ ಆಫ್ ಗಾರ್ಡನ್ ಸಿಟಿ ಬೆಂಗಳೂರು ಅಧ್ಯಕ್ಷ ಸಿ ಎಸ್ ಬಾಲಸುಬ್ರಮಣ್ಯ ಮುಂದಿನ ಅಂತರಾಷ್ಟ್ರೀಯ ಸಮ್ಮೇಳನದ ಕುರಿತು ವಿವರವಾದ ಮಾಹಿತಿ ನೀಡಿ ಆಮಂತ್ರಣ ಪತ್ರಿಕೆಯನ್ನು ಸಂಸ್ಥೆಗೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಹೇರೂರು ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಜಯಕರ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಗೌರವ ಸಲಹೆಗಾರ ಮಧುಸೂದನ್ ಹೇರೂರು ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಯಿತು. ಕಾರ್ಯದರ್ಶಿ ಮೀಲ್ಟನ್ ಒಲಿವೇರ ವರದಿ ವಾಚಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ್ ಬಿ, ಕಿಶೋರಿ ಶೆಟ್ಟಿ, ವಿವೇಕಾನಂದ ಕಾಮತ್ ದಂಪತಿಗಳು, ಕಲಾವಿದರಾದ ಸಚಿನ್ ಪೈ ಅವರನ್ನು ಗೌರವಿಸಲಾಯಿತು. ಡೋರಿಸ್ ಡಿಸಿಲ್ವ, ಸುಧಾಕರ್ ಸನ್ಮಾನಿತರ ಪರಿಚಯ ಮಾಡಿದರು. ವಿವಿಧ ಗಣ್ಯರನ್ನು ಗೌರವಿಸಲಾಯಿತು ಶ್ರೀನಾಥ್ ಕೋಟ ರೋನಾಲ್ಡ್, ಪ್ರತಿಮಾ ಸಹಕರಿಸಿದರು.
ರಾಫವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.
