ದೈಗೋಳಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ರೂಪ ವರ್ಕಾಡಿಗೆ ಸನ್ಮಾನ

0
9

ಮಂಜೇಶ್ವರ : ಜ್ಞಾನೋದಯ ಸಮಾಜ(ರಿ.)ದೈಗೋಳಿಯ ಆಶ್ರಯದಲ್ಲಿ ಸೆಪ್ಟೆಂಬರ್ 14 ರಂದು ಜರಗಿದ 45 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ಶ್ರೇಷ್ಠ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ತುಳುರಂಗಭೂಮಿ ಕಲಾವಿದೆ ರೂಪಶ್ರೀ ವರ್ಕಾಡಿರವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ದೈಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಲ್ಲಿ ಹಲವು ವರ್ಷಗಳಿಂದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿರುವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಾಬು ಮೂಲ್ಯ ದೈಗೋಳಿಯವರನ್ನು ಗೌರವಿಸಲಾಯಿತು.

ಸಭಾಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ತಿಲಕ್ ಪ್ರಸಾದ್ ಅಡೆಕಳಕಟ್ಟೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಮೀoಜ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತ ಕುಮಾರಿ ಬೋಳಂತಕೋಡಿ, ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಪಜ್ವ, ಮೀoಜ ಪಂಚಾಯತ್ ನ್ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಸೋಮಪ್ಪ ದೈಗೋಳಿ, ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ನೂಜಿ, ಅಂಗನಿಮಾರು ಇದರ ಟ್ರಸ್ಟಿ ಪ್ರಧಾನ ಕಾರ್ಯದರ್ಶಿಯಾದ ಹೂವಯ್ಯ ನೂಜಿ ಭಾಗವಹಿಸಿದ್ದರು.

ವಿದ್ವಾನ್ ವೇ. ಮೂ. ಕುರಿಯ ರಾಮ ಮೂರ್ತಿ ರವರು ಧಾರ್ಮಿಕ ಸಂದೇಶ ನೀಡಿದರು. ಜ್ಞಾನೋದಯ ಸಮಾಜದ ಅಧ್ಯಕ್ಷರು ಗಣೇಶೋತ್ಸವ ಸಮಿತಿಯ ಗೌರ ವಾಧ್ಯಕ್ಷರಾದ ಪಿ.ಶಿವರಾಮ ಭಟ್ ಮಡ್ವ, ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಪಜ್ವ ಸತ್ಯನಾರಾಯಣ ಭಟ್ ದೈಗೋಳಿ, ಗಣೇಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಬಿ. ವಿ. ರಾಜಗೋಪಾಲ್ ದೈಗೋಳಿ,ಗಣೇಶೋತ್ಸವ ಸಮಿತಿ ಮಹಿಳಾ ಅಧ್ಯಕ್ಷರಾದ ಡಾ. ವಿಜಯಲಕ್ಷ್ಮೀ ಶರ್ಮಾ ಉಪಸ್ಥಿತರಿದ್ದರು.ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳಾಗ ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ, ಮಾಧವ ಶೆಟ್ಟಿಗಾರ್ ದೈಗೋಳಿ ವಂದಿಸಿದರು. ಗಣೇಶ್ ಭಟ್ ಮಾಸ್ಟರ್ ದೈಗೋಳಿ ನಿರೂಪಿಸಿದರು.ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಮಹಾಗಣಪತಿ ಹೋಮ, ಭಜನೆ,ಕುಣಿತ ಭಜನೆ,ಭಕ್ತಿ ಗೀತೆ ಸ್ವರ್ಧೆ, ಛದ್ಮ ವೇಷ ಸ್ವರ್ಧೆ,ಪ್ರಸಾದ ವಿತರಣೆ, ಮಹಾಮಂಗಳಾರತಿ, ಪ್ರಸಾದ ಭೋಜನ ನಂತರ ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ದತ್ತಾoಜನೇಯ ಕಲಾ ಬಳಗ ಕಣ್ವತೀರ್ಥ ದಿಂದ ಭರತ ವೈಭವ ನಡೆಯಿತು. ಸಂಜೆ ಮಹಾಮಂಗಳಾರತಿ ನಂತರ ಶೋಭಾಯಾತ್ರೆ ಪ್ರಾರಂಭವಾಗಿ ಶ್ರೀ ಗಣೇಶ ವಿಸರ್ಜನಾ ಕಾರ್ಯಕ್ರಮವು ಅನ್ನ ಸಂತರ್ಪಣೆಯೊಂದಿಗೆ ಕಣಿಯೂರಿನ ಸಾರ್ವಜನಿಕ ಕೆರೆಯಲ್ಲಿ ಜರಗಿತು.