ಮಂಗಳೂರು : ಮಂಗಳೂರಿನಲ್ಲಿ ಏರ್ ಇಂಡಿಯಾ ಎಕ್ಸ್‍ಪ್ರೆಸ್‍ನ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಕುರಿತಾದ ವರದಿಗಳಿಗೆ ಸಂಬಂಧಿಸಿದಂತೆ, ಹಿನ್ನೆಲೆ ವಿವರಗಳು ಮತ್ತು ಅಧಿಕೃತ ಹೇಳಿಕೆ ಈ ಕೆಳಗಿನಂತಿವೆ
ಏರ್ ಇಂಡಿಯಾ ಎಕ್ಸ್‍ಪ್ರೆಸ್ ಮೂಲಕ ತಿರುಚಿಯಿಂದ ಮಂಗಳೂರು ಮಾರ್ಗವಾಗಿ ಮುಂಬೈಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ, ವಿಮಾನದ ವಿಳಂಬದಿಂದಾಗಿ ಮುಂಬೈಗೆ ಹೋಗುವ ಮುಂದಿನ ಸಂಪರ್ಕ ವಿಮಾನವನ್ನು ಅವರು ತಪ್ಪಿಸಿಕೊಳ್ಳಬೇಕಾಗುತ್ತದೆ ಎಂಬ ವಿಷಯವನ್ನು ತಿರುಚಿಯಲ್ಲಿ ವಿಮಾನ ಹತ್ತುವ ಸಂದರ್ಭದಲ್ಲಿ ತಿಳಿಸಲಾಯಿತು. ಪ್ರಯಾಣಿಕರ ಒಪ್ಪಿಗೆಯ ಮೇರೆಗೆ, ಅವರ ಪರಿಷ್ಕøತ ಪ್ರಯಾಣದ ಯೋಜನೆಗೆ ಅನುಕೂಲವಾಗುವಂತೆ ವಿಮಾನಯಾನ ಸಂಸ್ಥೆಯು ಮಂಗಳೂರಿನಲ್ಲಿ ರಾತ್ರಿಯ ವಾಸ್ತವ್ಯಕ್ಕಾಗಿ ಹೋಟೆಲ್ ವ್ಯವಸ್ಥೆಯನ್ನು ಕಲ್ಪಿಸಿತ್ತು. ದುರದೃಷ್ಟವಶಾತ್, ಹೋಟೆಲ್‍ನಲ್ಲಿ ತಂಗಿದ್ದಾಗ ಆ ಪ್ರಯಾಣಿಕರು ಮೃತಪಟ್ಟರು.
ಹೇಳಿಕೆ:
“ವಿಮಾನ ಸಂಪರ್ಕ ತಪ್ಪಿದ ಕಾರಣದಿಂದಾಗಿ ವಿಮಾನಯಾನ ಸಂಸ್ಥೆಯು ಹೋಟೆಲ್‍ನಲ್ಲಿ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಿದ್ದ ಮಂಗಳೂರಿನ ಹೋಟೆಲ್ ಒಂದರಲ್ಲಿ ನಮ್ಮ ಪ್ರಯಾಣಿಕರೊಬ್ಬರು ಮೃತಪಟ್ಟಿರುವುದು ನಮಗೆ ತೀವ್ರ ದುಃಖವನ್ನುಂಟುಮಾಡಿದೆ. ಮೃತರ ಕುಟುಂಬಕ್ಕೆ ನಾವು ನಮ್ಮ ಸಂತಾಪವನ್ನು ಸೂಚಿಸುತ್ತೇವೆ. ನಾವು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ಒದಗಿಸುತ್ತೇವೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುವುದನ್ನು ಮುಂದುವರಿಸುತ್ತೇವೆ.” – ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಕ್ತಾರರು
ವಿವರಗಳಿಗೆ ಸಂಪರ್ಕಿಸಿ: ಯಶ್ ಶರ್ಮಾ, +91-9650872245
