ಹೊಸ ಅಂಗಣ ಮಾಸ ಪತ್ರಿಕೆಯ ದಶಮಾನೋತ್ಸವ ಸಂಭ್ರಮ

0
3

ಮೂಲ್ಕಿ;.ಇಂದಿನ ದಿನಗಳಲ್ಲಿ ಪತ್ರಿಕೆಯನ್ನು ನಡೆಸುವುದು ಕಷ್ಟವಾಗಿದ್ದು ಜಾಹಿರಾತು ಮೇಲೆ ಪತ್ರಿಕೆ ಅವಲಂಬಿಸಿದೆ. ಒಳ್ಳೆಯ ಸಾಹಿತ್ಯ,.ಜನಪರ ವಿಚಾರ,ವಸ್ತು ಸ್ತಿತಿಯನ್ನು ಪ್ರಕಟಿಸುವ ಕಾರ್ಯವಾಗಬೇಕು, ವರದಿಗಳು ಸಮಾಜವನ್ನು ತಲುಪಬೇಕು,ಜೊತೆಗೆ ಪತ್ರಿಕೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗಬಾರದೆಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನ್ನ ಪೂರ್ಣ ಸಭಾಗೃಹದಲ್ಲಿ ಜರಗಿದ ಸಾಹಿತಿ, ಹರೀಶ್ಚಂದ್ರ ಪಿ ಸಾಲ್ಯಾನ್ ಸಂಪಾದಕತ್ವದ ಹೊಸ ಅಂಗಣ ಮಾಸ ಪತ್ರಿಕೆಯ ದಶಮಾನೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ,ತುಳುನಾಡ ಮದಿಮೆ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶಾಸಕ ಉಮಾನಾಥ ಎ ಕೋಟ್ಯಾನ್‌ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು , ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು. ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸ್ಯೆಟಿ ಹಳೆಯಂಗಡಿಯ ಅಧ್ಯಕ್ಷ ವಸಂತ್‌ ಬೆರ್ನಾಡ್‌,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ.ರಾಷ್ತ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಸೂರ್ಯಕಾಂತ್‌ ಜೆ ಸುವರ್ಣ,ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಕೆ ಭುವನಾಭಿರಾಮ ಉಡುಪ,ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುನೀಲ್‌ ಆಳ್ವ,ಹಿರಿಯ ನ್ಯಾಯವಾದಿ ಭಾಸ್ಕರ ಹೆಗ್ಡೆ,ಮೂಲ್ಕಿ ಶಾಂಭವಿ ಜೇಸಿ ಟ್ರಸ್ತ್‌ ನ ಮಾಜಿ ಅಧ್ಯಕ್ಷ ಮೊಹಮ್ಮದ್‌ ಹಬೀಬುಲ್ಲಾ,ಬಪ್ಪನಾಡು ಕಾಂತು ಸೇರ್ವೆಗಾರ ಧರ್ಮ ಚಾವಡಿಯ ಅಧ್ಯಕ್ಷ ವಾಸು ಪೂಜಾರಿ,ಸುದರ್ಶನ್‌ ಮೂಡುಬಿದಿರೆ, ಬಪ್ಪನಾಡು ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು,ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಮತ್ತಿತರ ಗಣ್ಯರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಯುವ ವಕೀಲೆ ಸಮೀಕ್ಷಾ ಹೆಗ್ಡೆ,ರೆಮೋಲಾ,ದೀಪಾಲಿ ಶೆಟ್ಟಿ,ಮಹಾಬಲ ಕರ್ಕೇರ ಸೇರಿದಂತೆ ಸಾಧಕರನ್ನು ಗೌರವಿಸಲಾಯಿತು.

ಮೂಲ್ಕಿ ರೋಟರಿ ಕ್ಲಬ್‌ ಅಧ್ಯಕ್ಷೆ ಭಾನುಮತಿ ಶೆಟ್ಟಿ,ಮೂಲ್ಕಿ ನಗರ ಪಂಚಾಯತ್‌ ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣ,ಸಮಾಜ ಸೇವಕರಾದ ಸುರೇಂದ್ರ ಜಿ ಶೆಣ್ಯೆ,ವಾಸು ಪೂಜಾರಿ ಚಿತ್ರಾಪು,ಲೇಖಕ ಎ ಕೃಷ್ಣಾನಂದ ಶೆಟ್ಟಿ ಐಕಳ,ಉದ್ಯಮಿಗಳಾದ ಕೇಶವ ಸನಿಲ್‌,ಜಯಕೃಷ್ಣ ಬಿ ಕೋಟ್ಯಾನ್‌,ಜಾನ್‌ ಕ್ವಾಡ್ರಸ್‌,ಮೂಲ್ಕಿ ಶಾಂಭವಿ ಜೇಸಿ ಟ್ರಸ್ತ್‌ ನ ಅಧ್ಯಕ್ಷ ದಿನೇಶ್‌ ಶೆಟ್ಟಿ ಮತ್ತು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕ ಪುನೀತ್‌ ಕೃಷ್ಣರಿಗೆ ಹೊಸ ಅಂಗಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.,ಪತ್ರಿಕೆಯ ಗೌರವ ಸಲಹೆಗಾರು ಮತ್ತು ಪತ್ರಕರ್ತರನ್ನು ಸನ್ಮಾನಿಸಲಾಯಿತು,ಬಳಿಕ ರಂಗ ಮಿಶ್ರಣ ಗ್ರೂಫ್‌ ಮಂಗಳೂರುರವರಿಂದ ಸಾಂಸ್ಕ್ರತಿಕ ವ್ಯೆವಿಧ್ಯ ಕಾರ್ಯಕ್ರ ನಡೆಯಿತು, ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ ಸಾಹಿತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕಾರ್ಯ ಮಾಡಬೇಕೆಂದು ಹೇಳಿದರು.

ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,, ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ, ಮೂಲ್ಕಿಯ ಸಂಚಾಲಕ ಹರೀಂದ್ರ ಸುವರ್ಣ,ಉದ್ಯಮಿ ಪ್ರಭಾಕರ ಪೂಜಾರಿ,ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್‌ ಅಂಚನ್,ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಶ್ರೀ ಬ್ರಹ್ಮಬೈದರ್ಕಳ ಗರಡಿ, ಕನ್ನಂಗಾರ್ ಹೆಜಮಾಡಿಯ ಅಧ್ಯಕ್ಷ ಸೀನ ಪೂಜಾರಿ ಮತ್ತಿತರ ಗಣ್ಯರು ಉಪಸ್ತಿತರಿದ್ದರು.ದಿನೇಶ್‌ ಶೆಟ್ಟಿ ಸ್ವಾಗತಿಸಿದರು,ಹೊಸ ಅಂಗಣ ಮಾಸ ಪತ್ರಿಕೆ ಸಂಪಾದಕ ಹರೀಶ್ಚಂದ್ರ ಪಿ ಸಾಲ್ಯಾನ್‌ ಪ್ರಸ್ತಾವನೆಗ್ಯೆದರು,ಚರಣ್‌ ಬಜಪೆ ವಂದಿಸಿ,ನಿರೂಪಿಸಿದರು.