ಉಡುಪಿ: ಜುಲೈ 27, 2026 ರಂದು ‘ಗೋಮಾತೆಯ ಗೌರವದ ಅಭಿಯಾನ’ ಅಂಗವಾಗಿ ಉಡುಪಿಯ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಪಾಲರಿಗೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿದ್ದ ಪ್ರಮುಖ ಬೇಡಿಕೆಗಳು:
ಸಂಪೂರ್ಣ ಗೋ ಹತ್ಯೆ ನಿಷೇಧ: ಭಾರತದಾದ್ಯಂತ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.
ರಾಷ್ಟ್ರ ಮಾತೆ ಸ್ಥಾನಮಾನ: ಹಸುವಿಗೆ ‘ರಾಷ್ಟ್ರ ಮಾತೆ’ ಅಥವಾ ರಾಷ್ಟ್ರೀಯ ಪ್ರತಿಷ್ಠಾನದ ಗೌರವಾನ್ವಿತ ಸ್ಥಾನಮಾನ ನೀಡುವುದು.
ಕೇಂದ್ರ ಸಚಿವಾಲಯ ಹಾಗೂ ಕಾಯ್ದೆ: ಗೋ ಸೇವೆಗಾಗಿ ವಿಶೇಷ ಕೇಂದ್ರೀಯ ಕಾನೂನು ಜಾರಿಗೆ ತರುವುದು ಮತ್ತು ಪ್ರತ್ಯೇಕ ಕೇಂದ್ರೀಯ ಸಚಿವಾಲಯವನ್ನು ಸ್ಥಾಪಿಸುವುದು.
ಮೇವು ಭದ್ರತಾ ನೀತಿ: ಜಾನುವಾರುಗಳಿಗೆ ಉಪಯುಕ್ತವಾಗುವಂತೆ ರಾಷ್ಟ್ರೀಯ ‘ಮೇವು ಭದ್ರತಾ ನೀತಿ’ಯನ್ನು ಅಂತಿಮಗೊಳಿಸುವುದು.
ಪಂಚಗವ್ಯ ಉತ್ಪನ್ನಗಳ ಉತ್ತೇಜನ: ವೇದ ಲಕ್ಷಣ ಗೋ ವಂಶದ (ನಾಟಿ/ದೇಸಿ ಜಾನುವಾರು) ಜಾನುವಾರುಗಳಿಂದ ದೊರೆಯುವ ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಹೆಚ್ಚಿಸುವುದು.
ಉಪಸ್ಥಿತರಿದ್ದ ಪ್ರಮುಖರು:
ವಿಜಯ್ ಕೊಡವೂರು (ತಾಲೂಕು ಸಂಚಾಲಕರು), ಗೀತಾಂಜಲಿ ಸುವರ್ಣ (ಮಾಜಿ ಜಿ.ಪಂ ಸದಸ್ಯೆ), ಬ್ರಹ್ಮಾವರ ತಾಲೂಕು ಪ್ರಮುಖರಾದ ರಾಘವೇಂದ್ರ ಪ್ರಭು ಕರ್ವಾಲು, ವೀಣಾ ಶೆಟ್ಟಿ, ರಮಿತಾ ಸೂರ್ಯವಂಶಿ, ಸಂತೋಷ್ ಹಾಗೂ ಎಬಿವಿಪಿ ಮುಖಂಡ ರಂಜಿತ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

