ಬಂಟ್ವಾಳ : ಶ್ರೀ ಮಹಾಲಿಂಗೇಶ್ವರ ಮಹಿಳಾಭಜನಾ ಮಂಡಳಿ ಬಂಟ್ವಾಳ ವತಿಯಿಂದ ಅಧಿಕಮಾಸದ ಪರ್ವಕಾಲದಲ್ಲಿ ಮನೆ ಮನೆಯಲ್ಲಿ ಭಜನೆ ಐದನೇ ಮಾಲಿಕೆಯಾಗಿ ಶಾಂಭವಿ ಎಸ್ ರಾವ್ ಆಮ್ ಟೂರ್ ಮನೆಯಲ್ಲಿ ಸಾಮೂಹಿಕ ನಾಮ ಸಂಕೀರ್ತನೆ ಕಾರ್ಯಕ್ರಮ ಬುಧವಾರದಂದು ಸಂಪನ್ನಗೊಂಡಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣಅರ್ಚಕ ಪುರೋಹಿತ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಹೊಳ್ಳ, ವೇದಮೂರ್ತಿ ರಾಜೇಶ್ ಮೈಯ್ಯ, ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಉಮಾ ಸೋಮ ಯಾಜಿ, ಭಜನಾ ಮಂಡಳಿಯ ಕಾರ್ಯದರ್ಶಿ ಅನ್ನಪೂರ್ಣೇಶ್ವರಿ, ಮೊದಲಾದವರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

