ಮೂಡುಬಿದಿರೆ : ಭಾರತದ ಉದಯೋನ್ಮುಖ ಕಬಡ್ಡಿಪಟು ಧನಲಕ್ಷ್ಮಿ ಪೂಜಾರಿ ಕ್ರೀಡಾ ಕೋಟಾದಡಿ ಗುಜರಾತ್ ಆದಾಯ ತೆರಿಗೆ ಇಲಾಖೆಯಲ್ಲಿ ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದು, ಕ್ರೀಡಾ ಕ್ಷೇತ್ರದ ಸಾಧನೆಗೆ ಮತ್ತೊಂದು ಮಹತ್ವದ ಗೌರವ ಲಭಿಸಿದೆ.
ಕ್ರೀಡಾ ಕ್ಷೇತ್ರದಲ್ಲಿ ನಿರಂತರ ಸಾಧನೆ ಮೂಲಕ ಗುರುತಿಸಿಕೊಂಡಿರುವ ಧನಲಕ್ಷ್ಮಿ ಪೂಜಾರಿ ಅವರ ಆಯ್ಕೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹರ್ಷ ವ್ಯಕ್ತಪಡಿಸಿದೆ. ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿನಿಯಾಗಿರುವ ಧನಲಕ್ಷ್ಮಿ ಪೂಜಾರಿ ಅವರ ಶ್ರಮ, ಪರಿಶ್ರಮ ಮತ್ತು ಕ್ರೀಡಾ ಬದ್ಧತೆಯನ್ನು ಪ್ರತಿಷ್ಠಾನ ಶ್ಲಾಘಿಸಿದೆ.
ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು, ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಧನಲಕ್ಷ್ಮಿ ಪೂಜಾರಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ವೃತ್ತಿಜೀವನ ಮತ್ತು ಕ್ರೀಡಾ ಪಯಣದಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ದಾಖಲಿಸಲಿ ಎಂದು ಶುಭ ಹಾರೈಸಿದರು.

