ಮೂಡುಬಿದಿರೆಯ ಜನತೆಯನ್ನು ಎಷ್ಟು ಎಚ್ಚರಿಸಿದರು ಉಪಯೋಗ ಇಲ್ಲದಂತೆ ಕಂಡುಬರುತ್ತದೆ. ಸಾಮಾನ್ಯವಾಗಿ ಪುರಸಭೆಯವರು ಎಲ್ಲ ರೀತಿಯ ಕೊಳಕು ಕಶ್ಮಲಗಳನ್ನು ರಸ್ತೆ ಹಾಗೂ ಬದಿಗಳಿಂದ ನಿವಾರಿಸುತ್ತಿದ್ದರು ಕೂಡ ಕೊಳಚೆ ನೀರು ಮತ್ತೆ ಮತ್ತೆ ರಸ್ತೆಗೆ ಬಿಟ್ಟು ಪರಿಸ್ಥಿತಿಯನ್ನು ಹದಗೆಡಿಸುತ್ತಿದ್ದಾರೆ.

ಈ ಹಿಂದೆ ಆಳ್ವಾಸ್ ಆಸ್ಪತ್ರೆ ಹಾಗೂ ಬಸ್ಸು ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮಾರುಕಟ್ಟೆಯ ಸಮೀಪದ ಹೋಟೆಲ್ ನಿಂದ ಕೊಳಚೆ ನೀರು, ರಸ್ತೆಗೆ ಬರುತ್ತಿತ್ತು. ಇದೀಗ ಇನ್ನೊಂದು ಹೋಟೆಲ್ನ ಕೊಳೆಚೆ ನೀರು ಹೆಸರಾಂತ ಸಿಲ್ಕ್ಸ್ ಅಂಗಡಿಯ ಎದುರು ರಸ್ತೆಯಲ್ಲಿ ಹರಿದುಕೊಂಡು ಹೋಗುತ್ತಿವೆ.
ಒಟ್ಟಾರೆ ಒಳಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದೆ ಎಲ್ಲ ರೀತಿಯ ಅವ್ಯವಸ್ಥೆಗಳು ಮತ್ತೆ ಮತ್ತೆ ಎದುರಿಗೆ ಬರುತ್ತಿದೆ. ಪುರಸಭೆಯವರು ಕೂಡ ಒಳಚರಂಡಿ ವ್ಯವಸ್ಥೆಗೆ ಸಮರ್ಪಕವಾದಂತಹ ವ್ಯವಸ್ಥೆಯನ್ನು ಮಾಡಿರುವುದಿಲ್ಲ ಎಂದು ಮತ್ತೆ ಮತ್ತೆ ಗೋಚರಿಸುತ್ತಿದೆ.
ವರದಿ ರಾಯಿ ರಾಜ ಕುಮಾರ

