ಅಗತ್ಯ ದಾಖಲೆ ಸಲ್ಲಿಸಿ ಮೇವಿನ ಕಿರು ಪೊಟ್ಟಣ ಪಡೆಯಲು ಅವಕಾಶ
ಮೂಡುಬಿದಿರೆ: ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಮೂಡುಬಿದಿರೆ ತಾಲೂಕಿನ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ರೈತರಿಗೆ ಉಚಿತವಾಗಿ ಮೇವಿನ ಕಿರು ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.
ಜಾನುವಾರುಗಳನ್ನು ಹೊಂದಿರುವ ಹಾಗೂ ನೀರಾವರಿ ಸೌಲಭ್ಯವಿರುವ ರೈತರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಮೇವಿನ ಕಿರು ಪೊಟ್ಟಣಗಳನ್ನು ಪಡೆಯಲು ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿದ್ದು, ಅವುಗಳ ವಿವರ ಹೀಗಿದೆ.
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
- FRUITS ID ಪ್ರತಿ.
- ಆಧಾರ್ ಕಾರ್ಡ್ ಪ್ರತಿ.
- RTC (ಪಹಣಿ) ಪ್ರತಿ.
ಅರ್ಹ ರೈತರು ಮೇಲಿನ ದಾಖಲೆಗಳನ್ನು ಸಲ್ಲಿಸಿ ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸುವ ಮೂಲಕ ಉಚಿತ ಮೇವಿನ ಕಿರು ಪೊಟ್ಟಣಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸುವಂತೆ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮೂಡುಬಿದಿರೆ ತಾಲೂಕು ಪ್ರಕಟಣೆಯಲ್ಲಿ ತಿಳಿಸಿದೆ.
