ಕಟೀಲು ಭ್ರಮರ ಇಂಚರ ನುಡಿ ಹಬ್ಬ

0
4

ಕಟೀಲು ದೇವಾಲಯವು ಆರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ನರ್ಸರಿಯಿಂದ ಸಂಸ್ಕೃತ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಕ್ರೀಡೆ, ಯಕ್ಷಗಾನ, ಸಾಹಿತ್ಯ, ಚಿತ್ರಕಲೆ ಹೀಗೆ ನಾನಾ ವೈವಿಧ್ಯಮಯ ಚಟುವಟಿಕೆಗಳಲ್ಲಿ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಸತತವಾಗಿ ಬೆಳೆಸುವ ಪ್ರಯತ್ನವನ್ನು ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಬ್ರಹ್ಮರ ಇಂಚರ ಹೆಸರಿನಲ್ಲಿ ನುಡಿ ಹಬ್ಬವನ್ನು ಪ್ರತಿವರ್ಷವೂ ಮೂರು ದಿನಗಳ ಕಾಲ ಹಮ್ಮಿಕೊಂಡು ಮುನ್ನಡೆಸುತ್ತಿದೆ.

ಈ ನುಡಿ ಹಬ್ಬದಲ್ಲಿ ನಾಡಿನ ಖ್ಯಾತ ವಿದ್ವಾಂಸರು, ಸಾಧಕರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಸಾಕಷ್ಟು ಉತ್ತೇಜನವನ್ನು ಕೂಡ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಮಾರ್ಗದರ್ಶನವಾಗಿ ಪರಿಣಮಿಸಿದೆ. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಆಗಮಿಸುವ ಸಾವಿರಾರು ಮಂದಿ ಸಾರ್ವಜನಿಕರು, ಸ್ಥಳೀಯರು ಕೂಡ ಇದರ ಪ್ರಯೋಜನವನ್ನು ಪಡೆದು ಸಾಹಿತ್ಯದ, ಸಂಸ್ಕೃತಿಯ, ಅನುಭವವನ್ನು ಪಡೆಯುತ್ತಿದ್ದಾರೆ, ಬೆಳೆಯುತ್ತಿದ್ದಾರೆ, ವಿದ್ಯಾರ್ಥಿಗಳನ್ನು ಆ ದಿಸೆಯಲ್ಲಿ ಬೆಳೆಸುತ್ತಿದ್ದಾರೆ.

ಅಕ್ಟೋಬರ್ 30ರಂದು ಬೆಳಗ್ಗೆ ಕಟೀಲು ಪದವಿ ಕಾಲೇಜಿನಿಂದ ಹೊರಟ ಮೆರವಣಿಗೆ ಪದವಿ ಪೂರ್ವ ಕಾಲೇಜಿನ ಶ್ರೀ ವಿದ್ಯಾ ಸಭಾಭವನದಲ್ಲಿ ಮುಕ್ತಾಯಗೊಂಡಿತು.
ಮಂಗಳೂರು ಎಲ್ ಎಲ್ ಪಿ ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ನ ಜನರಲ್ ಮ್ಯಾನೇಜರ್ ದಿವಾಕರ ಕದ್ರಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು ನುಡಿ ಹಬ್ಬದ ಅಧ್ಯಕ್ಷತೆಯನ್ನು ಡಾ ಜನಾರ್ಧನ್ ಭಟ್ ವಹಿಸಿದ್ದರು. ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಭಟ್ ಸಮ್ಮೇಳನವನ್ನು ದೀಪ ಬೆಳಗಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಅಷ್ಟಾವಧಾನಿ ಕಬ್ಬಿನಾಲೆ ವಸಂತ ಭಾರದ್ವಾಜ್, ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಕಟೀಲು ಅನುವಂಶಿಕ ಮುಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮಿ ನಾರಾಯಣ ಆಸ್ರಣ್ಣ, ಶ್ರೀ ಹರಿ ನಾರಾಯಣ ದಾಸ ಅಸ್ರಣ್ಣ, ಮಂದರ ವಿ ಕಾಲೇ, ಡಾ ಎಮ್ ಪಿ ಶ್ರೀನಾಥ್, ಬಿಪಿನ್ ಚಂದ್ರ ಶೆಟ್ಟಿ, ಲೋಕಯ್ಯ ಸಾಲ್ಯಾನ್, ಕಿರಣ್ ಕುಮಾರ್ ಶೆಟ್ಟಿ ಹಾಗೂ ಇತರರು ಹಾಜರಿದ್ದರು. ಮಿಥುನ್ ಕೊಡೆತ್ತೂರು ಕಾರ್ಯಕ್ರಮ ಸಂಘಟಿಸಿದ್ದರು.

ವರದಿ ರಾಯಿ ರಾಜ ಕುಮಾರ್