ಮೂಡುಬಿದಿರೆ: 2024-25ನೇ ಸಾಲಿನ ಅದ್ಭುತ ಸೇವಾ ಕಾರ್ಯಗಳಿಗಾಗಿ ಅಲಂಗಾರ್ ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಶಸ್ತಿ ಲಭಿಸಿದೆ.
2024-25 ಸಾಲಿನ ಅಧ್ಯಕ್ಷರಾದ ಲ. ಜಾಸಿoತ ಡಿಮೆಲ್ಲೊ, ಕಾರ್ಯದರ್ಶಿ ಲ. ರಾಜಾ ಡಿಸೋಜಾ ಹಾಗೂ ಕೋಶಾಧಿಕಾರಿ ಲ. ಅಲ್ವಿನ್ ಡಿಕುನ್ಹಾ ರವರ ನೇತೃತ್ವದಲ್ಲಿ ಕ್ಲಬ್ ಇಡೀ ಒಂದು ವರುಷದದ ಅದ್ಭುತ ಸೆವಾ ಕಾರ್ಯಕ್ರಮಗಳನ್ನು ಪರಿಗಣಿಸಿ ಜಿಲ್ಲಾ 7ನೇ ಸ್ಥಾನದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಹಿಂದೆಯೂ ಈ ಕ್ಲಬ್ ಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ಈ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭವು ವಾಮಂಜೂರಿನ ಚರ್ಚ್ ಸಭಾಭಾವನದಲ್ಲಿ ಜು. 20ರಂದು ನಡೆದಿದೆ. ಅಲಂಗಾರ್ ಕ್ಲಬ್ ನ 25 ಮಂದಿ ಸದಸ್ಯರುಗಳು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದರು.

