ಸುಬ್ರಹ್ಮಣ್ಯ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ (52) ಜು. 22 ರಂದು ನಾಪತ್ತೆಯಾಗಿದ್ದು, ಹುಡುಕಾಟ ಆರಂಭಿಸಲಾಗಿದೆ.
ಹೊನ್ನಪ್ಪ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಬ್ಯುಲೆನ್ಸ್ ವಾಹನ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು, ಜು. 22ರಂದು ಕರ್ತವ್ಯಕ್ಕೆ ಮನೆಯಿಂದ ಹೊರಟವರು ಬಳಿಕ ಕರ್ತವ್ಯಕ್ಕೆ ತೆರಳದೆ ನಾಪತ್ತೆಯಾಗಿದ್ದರು. ಅಗ್ರಹಾರ ದೇವಸ್ಥಾನದ ಬಳಿಯಿಂದಾಗಿ ಕುಮಾರಧಾರ ನದಿ ಕಡೆ ಹೋಗುತ್ತಿರುವುದು ಅಲ್ಲಿನ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಈ ಹಿನ್ನೆಲೆ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. . ಎಸ್‌ಡಿಆರ್ ಎಫ್ ತಂಡ, ಸ್ಥಳೀಯ ಈಜುಗಾರರು ನದಿಯಲ್ಲಿ ಶೋಧ ನಡೆಸುತ್ತಿದ್ದು, ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳದಲ್ಲಿದ್ದಾರೆ.

