ಮಂಗಳೂರು: ಅಶೋಕನಗರದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಮೇ 22 ಮತ್ತು 23 ರಂದು ದಕ್ಷಿಣ ಕನ್ನಡ ಜಿಲ್ಲೆಯ CBSE ಶಾಲೆಗಳಿಗಾಗಿ “ಕಂಪ್ಯೂಟೇಶನಲ್ ಥಿಂಕಿಂಗ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)” ವಿಷಯದ ಮೇಲೆ ಜಿಲ್ಲಾ ಮಟ್ಟದ ಚರ್ಚಾ ವೇದಿಕೆ ನಡೆಸಲು ತೀರ್ಮಾನಿಸಲಾಗಿದೆ.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯಗಳು ಹಾಗೂ ತಂತ್ರಜ್ಞಾನ ಅರಿವು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ CBSE ಶಾಲೆಗಳ ಸುಮಾರು 40 ಶಿಕ್ಷಕರು ಹಾಗೂ ಶೈಕ್ಷಣಿಕ ತಜ್ಞರು ಈ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವೇಳೆ ಆಧುನಿಕ ಶಿಕ್ಷಣದಲ್ಲಿ AI ಮತ್ತು ಕಂಪ್ಯೂಟೇಶನಲ್ ಥಿಂಕಿಂಗ್‌ನ ಮಹತ್ವದ ಬಗ್ಗೆ ವಿಚಾರ ವಿನಿಮಯ ನಡೆಯಲಿದ್ದು, ಶಿಕ್ಷಕರಿಗೆ ಹೊಸ ತಂತ್ರಜ್ಞಾನಗಳನ್ನು ತರಗತಿಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ, ಅಷ್ಟೇ ಅಲ್ಲದೆ ಈ ತರಬೇತಿ CBSE ಯ NEP 2020 ಮಾರ್ಗಸೂಚಿ ಅನ್ವಯ ಮೊದಲ ಬಾರಿಗೆ ಜ್ಯಾರಿ ಗೊಳಿಸಿದ ಶಾಲೆ ಎಸ್.ಡಿ.ಎಂ ಶಾಲೆ ಎಂಬ ಹೇಳಿಕೆಗೆ ಸಾಕ್ಷಿಯಾಗಲಿದೆ ಎಂದು ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಜೋಯ್ ಜೀವನ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

