ಕಾಸರಗೋಡು ಅಯ್ಯಪ್ಪ ಮಂದಿರದಲ್ಲಿ ಮಂಡಲಪೂಜೆ, ಮಕರ ಸಂಕ್ರಮಣ ಯಾತ್ರೆಗೆ ಸಿದ್ಧತೆ

0
5

ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಮಂದಿರದಲ್ಲಿ ಮಂಡಲಪೂಜೆ ಹಾಗೂ ಮಕರ ಸಂಕ್ರಮಣದ ತೀರ್ಥ ಯಾತ್ರೆಗೆ ಮಂದಿರದ ಗುರುಸ್ವಾಮಿಗಳವರಾದ ಬಾಲಕೃಷ್ಣ ಭವಾನಿಶಂಕರ, ಕರುಣಾಕರ, ಪುರುಶೋತ್ತಮ, ಅನಂತರಾಜ ಅವರು ಅಯ್ಯಪ್ಪ ಭಕ್ತರಿಗೆ ಮುದ್ರಾ ಧಾರಣೆ ಗೈದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಸುರೇಶ್ ಸುವರ್ಣ ಪ್ರಧಾನ ಕಾರ್ಯದರ್ಶಿ ಧನಂಜಯ ಮಾನ್ಯ, ಕಾರ್ಯದರ್ಶಿ ಮಹೇಶ್ ಮಾಳವಿಕ ಹಾಗೂ ಸಂಘದ ಪದಾಧೀಕಾರಿಗಳು,ಸದಸ್ಯರು ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.