ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ವತಿಯಿಂದ ಕನ್ನಡ ಶಾಲೆಗೆ ಧ್ವನಿವರ್ದಕ ಕೊಡುಗೆ

0
22

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕೃಷ್ಣಾಪುರ ಕಾಟಿಪಳ್ಳ 5ನೇ ವಿಭಾಗ ಮಂಗಳೂರು ಉತ್ತರ ಇವರಿಗೆ ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ಇವರ ವತಿಯಿಂದ ಶಾಲೆಯ ಮುಖ್ಯೋಪಾಧ್ಯಾನಿಯ ಮನವಿಯ ಮೇರೆಗೆ ಧ್ವನಿವರ್ಧಕವನ್ನು ಉಡುಗೊರೆಯಾಗಿ ಸಂಸ್ಥೆಯ ಅಧ್ಯಕ್ಷರಾದ ರವಿಪ್ರಸಾದ್ ಶೆಟ್ಟಿಗಾರ್ ಇವರ ಸಮ್ಮುಖದಲ್ಲಿ ಶಿಕ್ಷಕ ವೃಂದದವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಣಿ ಚಂದ್ರಾವತಿ, ಸಹ ಶಿಕ್ಷಕರಾದ ಜಾಹ್ನವಿ , ಹೇಮಾ ಉಡುಪಿ , ಸರೋಜಿನಿ ಹಾಗೂ ಗೌರವ ಶಿಕ್ಷಕಿಯರು ಮತ್ತು ವಿದ್ಯಾರ್ಥಿ ವೃಂದವರು ಮತ್ತು ವಿಶ್ವ ಭಾರತಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜೇಶ್ ಕುಡ್ಲ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೋಡಿಕಲ್, ಮಾಜಿ ಅಧ್ಯಕ್ಷರುಗಳಾದ ಶೀನ ನಾಯ್ಕ್ ,ರಾಮಕೃಷ್ಣ ಜೋಕಟ್ಟೆ ,ಅಶೋಕ್ ಕಲ್ಪನೆ, ಪುರುಷೋತ್ತಮ್ ನಾಯ್ಕ್ ,ರಾಜೇಶ್ ಸಾಲಿಯಾನ್ ಸಂಘದ ಸದಸ್ಯರಾದ ಹರೀಶ್ ನಾಯ್ಕ್ ಹಾಗೂ ತುಕಾರಾಮ ಉಪಸ್ಥಿತರಿದ್ದರು.