ಹೆಬ್ರಿ : ಬೆಳಗಾವಿಯ ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾ ವಿದ್ಯಾಲಯದ ಕಾಯ ಚಿಕಿತ್ಸೆ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ದೊಂಡೆರಂಗಡಿ ಸುಕೇತ ಕುಮಾರಿ ಶೆಟ್ಟಿ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಂಡ್ ರಿಚರ್ಸ್ ( ಕಾಹೆರ್ ) ಡಾಕ್ಟರೇಟ್ ಪದವಿ ನೀಡಿದೆ.
ಕಾರ್ಕಳ ತಾಲೂಕಿನ ದೊಂಡೆರಂಗಡಿಯವರಾದ ಸುಕೇತ ಕುಮಾರಿ ಶೆಟ್ಟಿ ಕಡ್ತಮಾರ್ ಮನೆ ವಸಂತಿ ನಾರಾಯಣ ಶೆಟ್ಟಿ ದಂಪತಿಯ ಪುತ್ರಿ. ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾ ವಿದ್ಯಾಲಯದ ಶಲ್ಯತಂತ್ರ (ಸರ್ಜರಿ) ವಿಭಾಗದ ಪ್ರಾಧ್ಯಾಪಕ ಡಾ. ಲಕ್ಷ್ಮೀಕಾಂತ್ ಅವರ ಪತ್ನಿ.
” ಎಫಿಕೇಸಿ ಆಫ್ ಇಂಟಿಗ್ರೇಟೆಡ್ ಆಯುರ್ವೇದ ಟ್ರೀಟ್ಮೆಂಟ್ ಪ್ರೋಟೋಕಾಲ್ ಇನ್ ಅನ್ ಕಂಟ್ರೋಲ್ಡ್ ಟೈಪ್ ೨ ಡಯಾಬಿಟೀಸ್ ಮೆಲ್ಲಿಟಸ್ ಎ ರಾಂಡಮೈಸ್ಡ್ ಕಂಟ್ರೋಲ್ಡ್ ಟ್ರಯಲ್ ” ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ. ಡಾ. ಸುಕೇತ ಕುಮಾರಿ ಶೆಟ್ಟಿ ಅವರಿಗೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಕಾಯ ಚಿಕಿತ್ಸಾ ವಿಭಾಗದ ಡಾ. ಬಸವರಾಜ್ ತುಬಾಕಿ ಅವರು ಮಾರ್ಗದರ್ಶನ ನೀಡಿದ್ದಾರೆ. ಬೆಳಗಾವಿಯ ಕೆಎಲ್‌ಇ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಹಾಸ್ ಕುಮಾರ ಶೆಟ್ಟಿ ಹಾಗೂ ಸಿಬಂದ್ಧಿ ಅಭಿನಂದನೆ ಸಲ್ಲಿಸಿದ್ದಾರೆ.