ಚಪ್ಟೇಗಾರ  ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಹಾಗೂ “ವಿಕಾಸ”-2025 ಕೌಶಲ್ಯ ತರಬೇತಿ ಸಮಾರೋಪ  ಸಮಾರಂಭ 

0
21

ದ.ಕ.ಜಿಲ್ಲಾ.ಚಪ್ಟೇಗಾರ ಸಮಾಜ ಸುಧಾರಕ ಸಂಘ (ರಿ) ಮಂಗಳೂರು  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಪೂರ್ವಭಾವಿ ಎರಡು  ದಿವಸಗಳ ಕೌಶಲ್ಯ ತರಬೇತಿ “ವಿಕಾಸ-2025” ಕಾರ್ಯಕ್ರಮದ ಸಮಾರೋಪ ಸಮಾರಂಭ   ದಿ. 28-12-2025 ರಂದು ವಿಶ್ವಕೊಂಕಣಿ ಕೇಂದ್ರದಲ್ಲಿ ಜರುಗಿತು.

ಸಮಾರಂಭದ ಮುಖ್ಯ ಅತಿಥಿ ಗೌತಮ ನಾಯಕ್, ಕೊ ಫೌಂಡರ್, ಸಿ ಒ ಒ ಇನ್ ಯುನಿಟಿ ಪ್ರೈ.ಲಿಮಿಟೆಡ್ ಇವರು ಶಿಬಿರಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದ ಹಾಗೂ ಉದ್ಯೋಗ ಅವಕಾಶಗಳ  ಬಗ್ಗೆ ಮಾಹಿತಿ ನೀಡಿದರು.  

ಚಪ್ಟೇಗಾರ ಸಮಾಜ ಸುಧಾರಕ ಸಂಘದ ಅಧ್ಯಕ್ಷ ರವೀಂದ್ರ ನಾಯಕ್ ಸಭಿಕರನ್ನು ಉದ್ದೇಶಿಸಿ  ವಿಶ್ವ ಕೊಂಕಣಿ ಕೇಂದ್ರದ ಕಾರ್ಯ ಕಲಾಪಗಳನ್ನು ಶ್ಲಾಘಿಸಿದರು. ಶಿಬಿರಾರ್ಥಿಗಳು ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ  ಸಿ ಎ ನಂದಗೋಪಾಲ್ ಶೆಣೈ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ” ವಿದ್ಯಾರ್ಥಿಗಳು ಯಾವುದೇ ಒಳ್ಳೆಯ  ಕಾರ್ಯಗಳನ್ನು  ಆರಂಭಿಸಲು ಹಿಂಜರಿಯದೇ ಆತ್ಮವಿಶ್ವಾಸ ಹಾಗೂ ನಂಬಿಕೆಯಿಂದ ಮುಂದೆ ಬರಬೇಕು. ಅಚಲವಾದ ನಂಬಿಕೆಯೇ  ಕಾರ್ಯ ಸಾಧನೆಗೆ ಕಾರಣ, ಎಲ್ಲಿ ಹೋದರೂ ನಮ್ಮ ಮಾತೃಭೂಮಿಯನ್ನು, ಮೂಲ ಸ್ಥಾನವನ್ನು ಮರೆಯಬಾರದು ಎಂದು ನುಡಿದರು.

 ರಂಗ ಚಿನ್ನಾರಿ, ರಾಜ್ಯ ಪ್ರಶಸ್ತಿ ವಿಜೇತ ಕಾಸರಗೋಡು ಚಿನ್ನಾ ತಂಡದವರು ನಾಟಕ ಕಲೆ ಅಭ್ಯಾಸ ಪೂರ್ವ ತರಬೇತು ನೀಡಿದರು.  ಶಿಬಿರಾರ್ಥಿಗಳು ಶಿಬಿರದ ಅನುಭವಗಳನ್ನು  ಸಭೆಯಲ್ಲಿ ಹಂಚಿಕೊಂಡರು. ಈ ಸಂಧರ್ಭದಲ್ಲಿ ಖೇಲೋ ಇಂಡಿಯಾ ಮಹಿಳಾ ಪ್ರೀಮಿಯರ್ ಲೀಗ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಬಂಗಾರದ ಪದಕವನ್ನು ಗೆದ್ದ ಶಿಬಿರಾರ್ಥಿ ಸ್ನೇಹಾ ನಾಯಕ ಇವರನ್ನು ಸನ್ಮಾನಿಸಲಾಯಿತು.    

ವಿಶ್ವಕೊಂಕಣಿಕೇಂದ್ರದ ಸಿಎಒ ಶ್ರೀಬಿದೇವದಾಸಪೈ, ದಕ ಜಿಲ್ಲಾ ಚಪ್ಟೇಗಾರ ಸಮಾಜಸುಧಾರಕ ಸಂಘದ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಲಕ್ಷ್ಮೀಕಿಣಿ ಕಾರ್ಯಕ್ರಮವನ್ನುನಿರೂಪಿಸಿದರು.ಚಪ್ಟೇಗಾರ ಸಮಾಜ ಸುಧಾರಕ ಸಂಘದ ಚಿದಾನಂದ ಎಮ್ ವಂದಿಸಿದರು.ಸುಮಾರುಐವತ್ತುವಿದ್ಯಾರ್ಥಿಗಳು‘ವಿದ್ಯಾಕಲ್ಪಕ’ ನಿಧಿಯಿಂದ ವಿದ್ಯಾರ್ಥಿವೇತನ ಪಡೆದುಎರಡು ದಿವಸಗಳ ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here