Dyson V16 Piston Animal vacuum ಭಾರತದಲ್ಲಿ ಬಿಡುಗಡೆ

0
4

315AW ಶಕ್ತಿಯುತ suction, anti-tangle ತಂತ್ರಜ್ಞಾನ; ಬೆಲೆ ₹79,900

ಬೆಂಗಳೂರು: ಮನೆ ಸ್ವಚ್ಛತೆಗೆ ಹೊಸ ತಂತ್ರಜ್ಞಾನ ಪರಿಚಯಿಸಿರುವ Dyson, ತನ್ನ ಹೊಸ Dyson V16 Piston Animal cordless vacuum ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Dysonನ ಅತ್ಯಂತ ಶಕ್ತಿಶಾಲಿ anti-tangle cordless vacuum ಆಗಿರುವ ಇದು, ವಿವಿಧ ರೀತಿಯ ನೆಲಹಾಸುಗಳನ್ನು ಸುಲಭವಾಗಿ ಸ್ವಚ್ಛಗೊಳಿಸುವ ಜೊತೆಗೆ ಉದ್ದನೆಯ ಕೂದಲು ಸಿಕ್ಕಿಕೊಳ್ಳದಂತೆ ವಿನ್ಯಾಸಗೊಳಿಸಲಾಗಿದೆ.

ಹೊಸ All Floor Cones Sense cleaner headನಲ್ಲಿ ಎರಡು conical brush bars ಇದ್ದು, ಸ್ವಚ್ಛಗೊಳಿಸುವ ಸಂದರ್ಭದಲ್ಲಿ 25 ಇಂಚು ಉದ್ದದ ಕೂದಲನ್ನೂ brush barನಲ್ಲಿ ಸಿಕ್ಕಿಕೊಳ್ಳದಂತೆ ನೇರವಾಗಿ dust binಗೆ ಕಳುಹಿಸುವ ವ್ಯವಸ್ಥೆ ಹೊಂದಿದೆ. ಇದರಿಂದ brush barಗೆ ಸುತ್ತಿಕೊಂಡ ಕೂದಲನ್ನು ಕೈಯಿಂದ ತೆಗೆಯುವ ಅಥವಾ ಕತ್ತರಿಸುವ ಅಗತ್ಯ ಕಡಿಮೆಯಾಗುತ್ತದೆ.

900W Hyperdymium motor

Dyson V16 Piston Animalನಲ್ಲಿ ಹೊಸ Dyson Hyperdymium 900W motor ಅಳವಡಿಸಲಾಗಿದ್ದು, 315AW suction ಶಕ್ತಿ ನೀಡುತ್ತದೆ. ಹಿಂದಿನ ಮಾದರಿಗಿಂತ 50% ಹೆಚ್ಚು ಶಕ್ತಿಶಾಲಿ motor ಹೊಂದಿದೆ ಎಂದು ಕಂಪನಿ ತಿಳಿಸಿದೆ. ಅಗತ್ಯಕ್ಕೆ ಅನುಗುಣವಾಗಿ suction ಹೆಚ್ಚಿಸಲು Boost modeನಲ್ಲಿ ಐದು ಹೆಚ್ಚುವರಿ cyclones ಕಾರ್ಯನಿರ್ವಹಿಸುತ್ತವೆ.

CleanCompaktor bin ವಿಶೇಷತೆ

ಹೊಸ Dyson CleanCompaktor bin ಧೂಳು ಮತ್ತು ಕಸವನ್ನು ಸಂಕುಚಿತಗೊಳಿಸುವ ತಂತ್ರಜ್ಞಾನ ಹೊಂದಿದ್ದು, ಸಾಮಾನ್ಯ ವ್ಯವಸ್ಥೆಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಧೂಳು ಮತ್ತು ಕಸವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. Bin ಖಾಲಿ ಮಾಡುವ ಸಂದರ್ಭದಲ್ಲಿ ಒಳಭಾಗವನ್ನು ಸ್ವಚ್ಛಗೊಳಿಸುವ ವ್ಯವಸ್ಥೆಯೂ ಇದರಲ್ಲಿ ಅಳವಡಿಸಲಾಗಿದೆ.

ವಿವಿಧ ನೆಲಹಾಸಿಗೆ ಸ್ವಯಂ ಹೊಂದಾಣಿಕೆ

All Floor Cones Sense cleaner head ನೆಲಹಾಸಿನ ಸ್ವರೂಪವನ್ನು ಗುರುತಿಸಿ brush barನ ವೇಗವನ್ನು ಸ್ವಯಂಚಾಲಿತವಾಗಿ ಹೊಂದಿಸುತ್ತದೆ. ಗಟ್ಟಿಯಾದ ನೆಲದಲ್ಲಿ ಶಬ್ದ ಕಡಿಮೆ ಮಾಡಲು ವೇಗವನ್ನು ತಗ್ಗಿಸಿದರೆ, ಕಾರ್ಪೆಟ್‌ಗಳನ್ನು ಸ್ವಚ್ಛಗೊಳಿಸುವಾಗ ಉತ್ತಮ ಕಾರ್ಯಕ್ಷಮತೆಗಾಗಿ ವೇಗವನ್ನು ಹೆಚ್ಚಿಸುತ್ತದೆ. ಇದರಿಂದ ವಿವಿಧ ನೆಲಹಾಸುಗಳಿಗೆ cleaner head ಬದಲಾಯಿಸುವ ಅಗತ್ಯವಿಲ್ಲ.

Dyson V16 Piston Animal MyDyson appಗೆ ಸಂಪರ್ಕಗೊಳ್ಳುವ ಸೌಲಭ್ಯವನ್ನೂ ಹೊಂದಿದೆ. ನಿರ್ವಹಣೆಗಾಗಿ real-time alerts, ಹೆಚ್ಚುವರಿ settings ಹಾಗೂ vacuumನ ಉತ್ತಮ ಬಳಕೆಗೆ ಹಂತ ಹಂತದ ಮಾರ್ಗದರ್ಶನವನ್ನು ಆ್ಯಪ್ ಒದಗಿಸುತ್ತದೆ.

ಇದರೊಂದಿಗೆ Crevice Tool ಮತ್ತು ಉದ್ದನೆಯ ಹಾಗೂ ಸಾಕುಪ್ರಾಣಿಗಳ ಕೂದಲಿಗಾಗಿ Hair Screw Tool 2.0 ಸೇರಿದಂತೆ ಎರಡು ವಿಶೇಷ ಉಪಕರಣಗಳನ್ನು ನೀಡಲಾಗಿದೆ.

Dysonನ Floorcare Engineering ವಿಭಾಗದ ಮುಖ್ಯಸ್ಥ Asaph Ooi ಮಾತನಾಡಿ, ಇಂದಿನ ಬ್ಯುಸಿ ಜೀವನಶೈಲಿಗೆ ಹೊಂದಿಕೊಳ್ಳುವ, ಕಾರ್ಯಕ್ಷಮತೆಯಲ್ಲಿ ರಾಜಿ ಮಾಡಿಕೊಳ್ಳದ ಸ್ವಚ್ಛತಾ ಪರಿಹಾರಗಳ ಅಗತ್ಯವಿದೆ. ನೈಜ ಜೀವನದಲ್ಲಿ ಎದುರಾಗುವ ಧೂಳು, ಕೂದಲು ಮತ್ತು ವಿವಿಧ ರೀತಿಯ ಕೊಳೆಯನ್ನು ಸುಲಭವಾಗಿ ನಿರ್ವಹಿಸುವ ಉದ್ದೇಶದಿಂದ V16 Piston Animal ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಬೆಲೆ ಮತ್ತು ಲಭ್ಯತೆ

Dyson V16 Piston Animal vacuum ಬೆಲೆ ₹79,900 ಆಗಿದ್ದು, Dyson.in ಹಾಗೂ ಭಾರತದಾದ್ಯಂತ ಇರುವ Dyson ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.