ಶಿಕ್ಷಣ ಭಾರತೀಯತೆ ಜೊತೆ ಬೆರೆತಾಗ ಮಾತ್ರ ಅದು ಉತ್ತಮವಾಗಲು ಸಾಧ್ಯ- ಡಾ. ಎಚ್. ಎಸ್. ಶೆಟ್ಟಿ

0
7

“ಶಿಕ್ಷಣ ಭಾರತೀಯತೆ ಜೊತೆ ಬೆರೆತಾಗ ಮಾತ್ರ ಅದು ಉತ್ತಮವಾಗಲು ಸಾಧ್ಯ. ಶಿಕ್ಷಕರಿಗೆ ಆತ್ಮಾಭಿಮಾನ ಅತ್ಯಂತ ಮುಖ್ಯ. ಶಿಕ್ಷಕನಾದವನು ಜ್ಞಾನವನ್ನು ನಿಸ್ವಾರ್ಥವಾಗಿ ಹಂಚುವ ಕಾರ್ಯ ಮಾಡಬೇಕು.ಆಗ ಶಿಕ್ಷಕ ಉನ್ನತ ಸ್ಥಾನಕ್ಕೇರಲು ಸಾಧ್ಯ. ಶಿಕ್ಷಣ ಕೇವಲ ಕೆಲಸ ಸಂಪಾದನೆಗೆ ಮಾತ್ರವಲ್ಲ ಅದರ ಮುಖ್ಯ ಉದ್ದೇಶ ಜ್ಞಾನ ಸಂಪಾದನೆ. ಆಧುನಿಕ ಶಿಕ್ಷಣ ಪದ್ಧತಿಯ ಜೊತೆಗೆ ನಮ್ಮ ನೆಲದ ಸಂಸ್ಕೃತಿಯನ್ನು ತಿಳಿಸುವ ಕೆಲಸ ರಾಮಕೃಷ್ಣ ಆಶ್ರಮದಂತಹ ಸಂಸ್ಥೆಗಳಿಂದ ಸಾಧ್ಯ. ಶಿಕ್ಷಕ ವೃತ್ತಿ ಪವಿತ್ರ ಹಾಗೂ ಗೌರವಪೂರ್ವಕ ವೃತ್ತಿ, ಒಬ್ಬ ಶಿಕ್ಷಕ ಉತ್ತಮ ಕೆಲಸಗಳನ್ನು ಮಾಡಲು ಸದಾ ಅವಕಾಶವಿದೆ.” ಎಂದು ಬೆಂಗಳೂರಿನ ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಚ್. ಎಸ್. ಶೆಟ್ಟಿ ಹೇಳಿದರು.

ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ನಡೆದ ಮೇಧಾ – ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎರಡನೇ ದಿನದ ಶೈಕ್ಷಣಿಕ ವಿಚಾರ ಸಂಕಿರಣ, 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ “ಶಿಕ್ಷಣದಿಂದ ಸಬಲೀಕರಣದತ್ತ, ಸಬಲೀಕರಣದಿಂದ ಉನ್ನತಿಯತ್ತ: ಚಾರಿತ್ರ‍್ಯ ಮತ್ತು ಸೇವೆಯಿಂದ ಬದುಕಿನ ನಿರ್ಮಾಣ” ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪುತ್ತೂರಿನವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ವಿಜಯನಾರಾಯಣ ಕೆ. ಎಂ. ಭಾಗವಹಿಸಿದರು.ಈ ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರಿನ ಎಂ.ಆರ್.ಪಿ.ಎಲ್. – ಒ.ಎನ್.ಜಿ.ಸಿ. ಯ ಮುಖ್ಯ ಮಹಾಪ್ರಬಂಧಕÀರಾದ ಪ್ರಶಾಂತ್ ಪೊದುವಾಳ್ ಅವರು ಮಾತನಾಡಿ,“ರಾಮಕೃಷ್ಣ ಮಿಷನ್ ಹಾಗೂ ಎಂ ಆರ್ ಪಿ ಎಲ್ ಸಂಸ್ಥೆಯ ಸಂಬAಧ ಕೇವಲ ಎರಡು ಸಂಸ್ಥೆಗಳ ಪಾಲುದಾರಿಕೆ ಮಾತ್ರವಲ್ಲ, ಅದು ಸಮೃದ್ಧ, ಮೌಲ್ಯಯುತ ಸಮಾಜ ನಿರ್ಮಾಣದ ಕಡೆಗಿನ ಒಂದು ಬದ್ಧತೆಯಾಗಿದೆ. ಶಿಕ್ಷಣ ಎಲ್ಲಾ ಸಾಮಾಜಿಕ ಬದಲಾವಣೆಯ ತಳಹದಿ. ಸಮಾಜದ ಸೇವೆ ಅತ್ಯಂತ ಉನ್ನತ ಸ್ತರದ ಪೂಜೆಯಾಗಿದೆ, ಅದು ಒಂದು ವ್ಯಕ್ತಿಗಿರಬಹುದು ಅಥವಾ ಸಮಾಜಕಿರಬಹುದು ಅಥವಾ ಅಗತ್ಯ ಇರುವ ವ್ಯಕ್ತಿಗಳಿಗಿರಬಹುದು. ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ತಂದೆ-ತಾಯಿಯರ ಜೊತೆ ಉನ್ನತವಾದ ಸ್ಥಾನವಿದೆ. ಶಿಕ್ಷಕ ವಿದ್ಯಾರ್ಥಿಯ ಬೌದ್ಧಿಕ ವಿಕಾಸದಲ್ಲಿ ಮೌಲ್ಯಗಳನ್ನು ಬೆಳೆಸುವುದರಲ್ಲಿ, ಈ ಮೂಲಕ ಸಮಾಜದ ನಡುವೆ ವಿದ್ಯಾರ್ಥಿ ಎಂಬ ದೀಪಗಳನ್ನು ಬೆಳಗುವುದರಲ್ಲಿ ಸಹಕಾರಿಯಾಗುತ್ತದೆ. ಈ ದೀಪಗಳು ಎಂದಿಗೂ ಬೆಳಗುತ್ತಿರುತ್ತವೆ. ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ಬೆಳಗುವ ಕಾರ್ಯವನ್ನು ಶಿಕ್ಷಕರು ಮಾಡಲಿ” ಎಂದು ಹೇಳಿದರು.

ವಿಶೇಷ ಅವಧಿಗಳು ಹಾಗೂ ಸಂವಾದ

ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ಮೈಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಯುಕ್ತೇಶಾನಂದಜಿ ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಉಡುಪಿಯಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ದಾಮೋದರ ಶರ್ಮ ರವರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಂತರ “ಸಾರ್ಥಕ ಬೋಧನೆ: ತರಗತಿಯಾಚೆ ಬದುಕಿನ ಪಾಠಗಳು”ಎಂಬ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಉಡುಪಿಯಹಿರಿಯ ಮನೋವೈದ್ಯರಾದಡಾ. ವಿರೂಪಾಕ್ಷ ದೇವರಮನೆ, ಮಂಗಳೂರಿನ ಶಿಕ್ಷಣತಜ್ಞರಾದ ಡಾ. ಕುಮಾರ ಸ್ವಾಮಿ ಎಚ್.ಹಾಗೂ ಮಂಗಳೂರಿನ ಮಾನವ ಸಂಪನ್ಮೂಲ ತರಬೇತುದಾರರಾದ ಸೌಜನ್ಯ ಹೆಗ್ಡೆಭಾಗವಹಿಸಿದರು.

ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ. ಸಂವಾದ ಕಾರ್ಯಕ್ರಮ ನಿರ್ವಹಿಸಿದರು. ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ನೀರ್ಚಾಲು ವಂದಿಸಿದರು. ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಮೃತ ಶಿಕ್ಷಣ ಮಹಾವಿದ್ಯಾಲಯ, ಸೈಂಟ್ ಅಲೋಶಿಯಸ್ ಶಿಕ್ಷಣ ಮಹಾವಿದ್ಯಾಲಯ, ಕಾವೂರಿನ ಲೀಲಾವತಿ ಶೆಟ್ಟಿ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರಿನ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ, ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯ, ಕುಂದಾಪುರದ ಕೋಟೇಶ್ವರದ ಚಿರಂತನ ಶಿಕ್ಷಕರ ಶಿಕ್ಷಣ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘದ ಪುತ್ತೂರು ನಗರದ ಸಂಸ್ಥೆಗಳಿAದ ಶಿಕ್ಷಕ ಪ್ರತಿನಿಧಿಗಳು, ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ಎನ್. ಎಸ್. ಎಸ್. ಸಂಯೋಜಕರು, ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಮಂಗಳೂರಿನ ವಿವಿಧ ಸಂಸ್ಥೆಗಳ ಆಸಕ್ತಶಿಕ್ಷಕರುಸೇರಿದಂತೆ ಸುಮಾರು 600 ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.

ಮೂರನೇದಿನದ ವಿಚಾರ ಸಂಕಿರಣ ಪ್ರಜ್ಞಾ – 2025 ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ 11 ಸೆಪ್ಟೆಂಬರ್ 2026 ರಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ