ಬೆಳ್ತಂಗಡಿ : ಹಿಂದೂ ಜಾಗರಣ ವೇದಿಕೆ ಆರಂಬೋಡಿ, ಎಲಿಯನಡುಗೋಡು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 41ನೇ ಮೊಸರು ಕುಡಿಕೆ ಉತ್ಸವ ವು ಬಹಳ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಶ್ರೀ ಕೃಷ್ಣಪ್ರಸಾದ್ ಅಸ್ರಣ್ಣರು ಶ್ರೀಕ್ಷೇತ್ರ ಪೂಂಜ ಇವರಿಂದ ಶ್ರೀಕೃಷ್ಣ ದೇವರಿಗೆ ಪೂಜೆ ನಡೆಯಿತು.ನಂತರ ಶ್ರೀಮಹಾವೀರ ಜೈನ್ ನದ್ಯೋಡಿ ಗುತ್ತು ಧ್ವಜಾರೋಹಣ ನೆರವೇರಿಸಿದರು ನಂತರ ರಕ್ಷಾ ಬಂಧನದೊಂದಿಗೆ, ಹಿಂ. ಜಾ. ವೇ. ಪೂರ್ಣವಧಿ ಪ್ರಚಾರಕರಾದ ಸಂದೇಶ್ ಕೊಡಗು ಬೌದ್ಧಿಕ್ ನೀಡಿದರು.

ಜೈ ಭಾರತ್ ಮಾತಾ ಭಜನಾ ಮಂಡಳಿ ಉಪ್ಪಿರ ತಂಡ ಭಜನೆ ನಡೆಸಿ ಕೊಟ್ಟರು. ನಂತರ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ, ಮತ್ತು ವಿವಿಧ ಮನೋರಂಜನೆ ಕಾರ್ಯಕ್ರಮ ಜರಗಿತು. ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ಹಾಗೂ ಆರಂಬೋಡಿ ಗ್ರಾಮ ಪಂಚಾಯತ್ ನ ನಿವೃತ್ತ ನೀರು ನಿರ್ವಾಹಕರಾದ ಸದಾಶಿವ ಶೆಟ್ಟಿ ಅಸನಬೆಟ್ಟು ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿಂ. ಜಾ. ವೇ. ಸಂಚಾಲಕ ಜನಾರ್ಧನ್ ಶೆಟ್ಟಿಗಾರ್, ಉತ್ಸವ ಸಮಿತಿಯ ಗೌರವಾದ್ಯಕ್ಷರಾದ ಟಿ. ನರಸಿಂಹ ಪೈ, ರಾಘವೇಂದ್ರ ಭಟ್, ಕಿರಣ್ ಕುಮಾರ್ ಮಂಜಿಲ,ಉತ್ಸವ ಸಮಿತಿ ಯ ಅಧ್ಯಕ್ಷರು ಪ್ರಣೀತ್ ಹಿಂಗಾಣಿ, ಕಾರ್ಯದರ್ಶಿ ನಿತೇಶ್ ಹನ್ನೆರಡು ಕವಲು,ಜೊತೆ ಕಾರ್ಯದರ್ಶಿ ನಂದಕುಮಾರ್ ಶೆಟ್ಟಿ, ಕೋಶಾಧಿಕಾರಿ ಸುಧಾಮ ಉಪ್ಪಿರ, ಸಂ. ಕಾರ್ಯದರ್ಶಿ ದೀಕ್ಷಿತ್ ಅಡಮುಗೇರು, ಸಮಿತಿಯ ಉಪಾಧ್ಯಕ್ಷರು, ಕ್ರೀಡಾ ವ್ಯವಸ್ಥಾಪಕರು, ಮಹಿಳಾ ಸದಸ್ಯರು, ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ, ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರು, ನಿರೂಪಕರಾದ ಉಮೇಶ್ ಶೆಟ್ಟಿ ಪಾಲ್ಯ, ದಯಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಸುರೇಶ್ ಎಚ್ ಹೊಕ್ಕಾಡಿಗೋಳಿ ಸ್ವಾಗತಿಸಿದರು. ನಂತರ ಶ್ರೀ ಶಾರದಾ ಕಲಾ ಆರ್ಟ್ಸ್ ಮಂಜೇ ಶ್ವರ ಇವರಿಂದ “ಒಂತೆ ಲೇಟಾಂಡ್ “ಆಂಡಲ!ತುಳು ಹಾಸ್ಯಮಯ ನಾಟಕ ಜರಗಿತು.

