ದಾವಣಗೆರೆ ಲಯನ್ಸ್ ಕ್ಲಬ್‌ನಲ್ಲಿ ಇಂಜಿನಿಯರ್ಸ್ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

0
25

ಸರ್ ಎಂ.ವಿ. ಅವರ ಸಾಧನೆ ಇಂದಿನ ಇಂಜಿನಿಯರ್‌ಗಳಿಗೆ ಸದಾ ಪ್ರೇರಣೆ

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ 165ನೇ ಜಯಂತಿಯ ಸವಿ ನೆನಪಿಗಾಗಿ ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ “ಇಂಜಿನಿಯರ್ಸ್ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ”ವನ್ನು ನಗರದ ಲಯನ್ಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಹಿರಿಯ ಇಂಜಿನಿಯರ್ ಪ್ರತೀಕ ಕನ್ಸಲ್ಟೆನ್ಸಿಯ ಎಸ್.ಬಿ. ಪಾಟೀಲ್ ಅವರ ದೀರ್ಘಕಾಲದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕವೂ ಅವರು ವೃತ್ತಿಪರವಾಗಿ ತಮ್ಮ ಸೇವೆಯನ್ನು ಮುಂದುವರಿಸಿದ್ದು, ಅನೇಕ ವಸತಿ ಕಟ್ಟಡಗಳು, ವಾಣಿಜ್ಯ ,ಕೈಗಾರಿಕಾ ಕಟ್ಟಡಗಳು, ಆಸ್ಪತ್ರೆಗಳು ಸೇರಿದಂತೆ ಹಲವು ನಿರ್ಮಾಣ ಕಾರ್ಯಗಳಲ್ಲಿ ತಮ್ಮ ತಾಂತ್ರಿಕ ಪರಿಣತಿಯನ್ನು ನೀಡಿದ್ದಾರೆ.


ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಬಿ. ಪಾಟೀಲ್, “ಸಮಾಜಕ್ಕೆ ಸೇವೆ ಸಲ್ಲಿಸಲು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವಕಾಶಗಳಿವೆ. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಸಮಾಜದ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆ ನೀಡಬಹುದು. ಲಯನ್ಸ್ ಕ್ಲಬ್‌ಗಳು ಹಲವು ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿವೆ” ಎಂದು ನುಡಿದರು.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಾವಣಗೆರೆ ಲಯನ್ಸ್ ಕ್ಲಬ್‌ನ ಸದಸ್ಯರಾದ ಲಯನ್ ದಿನೇಶ್ ಕೆ. ಶೆಟ್ಟಿ, ಲಯನ್ ಹೆಚ್.ವಿ. ಮಂಜುನಾಥ ಸ್ವಾಮಿ, ಲಯನ್ ವೆಂಕಟ ರೆಡ್ಡಿ, ಲಯನ್ ಪ್ರತಾಪ್ ಎ.ಬಿ., ಲಯನ್ ಸಂತೋಷ್ ಕೆ.ಎಸ್., ಲಯನ್ ಎಸ್.ಸಿ. ಬಸವರಾಜ, ಲಯನ್ ಎಂ.ಎಸ್. ಉದಯಕುಮಾರ್ ಹಾಗೂ ಲಯನ್ ರಘುರಾಮ್ ಅವರನ್ನು ಸಹ ಅವರ ಇಂಜೆನೀರಿAಗ್ ಕ್ಷೇತ್ರದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಲಯನ್ ದಿನೇಶ್ ಕೆ. ಶೆಟ್ಟಿ ಮಾತನಾಡಿ, “ರಾಜಕೀಯ ಕ್ಷೇತ್ರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಮಾಜ ಸೇವೆ ಸಲ್ಲಿಸಲು ಲಯನ್ಸ್ ಕ್ಲಬ್ ಪ್ರಮುಖ ಪ್ರೇರಣೆಯಾಗಿದೆ. ನನ್ನ ಈ ಬೆಳವಣಿಗೆಗೆ ಲಯನ್ಸ ಕ್ಲಬ್ ಭದ್ರ ಬುನಾದಿ ಇದ್ದಂತೆ, ಲಯನ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳು ಸಮಾಜಮುಖಿ ಕಾರ್ಯಗಳಿಗೆ ಸದಾ ಉತ್ತೇಜನ ನೀಡುತ್ತವೆ” ಅಧುನಿಕ ತಂತ್ರಜ್ಞಾನ ಬಳಸಿ ಸಿವಿಲ್ ಇಂಜಿನೀರಿAಗ್ ಕ್ಷೇತ್ರ ಉಹಿಸಲಾರದಸ್ಟು ಬೆಳೆಯುತ್ತಿದೆ ಎಂದರು.

ಲಯನ್ ಗವರ್ನರ್ ಆರ್.ಜಿ. ಶ್ರೀನಿವಾಸ್ ಮಾತನಾಡಿ, “ಕೃತಕ ಬುದ್ಧಿಮತ್ತೆ ಇಂದು ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಬಳಕೆಯಾಗುತ್ತಿದ್ದು, ಹಲವು ಕಾರ್ಯಗಳನ್ನು ಸುಲಭಗೊಳಿಸುವ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ” ಎಂದು ತಿಳಿಸಿದರು.

ಲಯನ್ ಹೆಚ್.ವಿ. ಮಂಜುನಾಥ ಸ್ವಾಮಿ ಮಾತನಾಡಿ, “ಇಂದು ಕಂಪ್ಯೂಟರ್, ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇಂತಹ ಆಧುನಿಕ ತಂತ್ರಜ್ಞಾನಗಳೇ ಇಲ್ಲದ ಕಾಲದಲ್ಲಿಯೇ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ದೇಶದ ಅಭಿವೃದ್ಧಿಗಾಗಿ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರು. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ಅಪಾರ ಜ್ಞಾನ, ಪರಿಶ್ರಮ ಮತ್ತು ದೂರದೃಷ್ಟಿಯಿಂದ ಕ್ರಾಂತಿಕಾರಕ ಸಾಧನೆ ಮಾಡಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಸ್ಥಾನ ಪಡೆದ ಮಹಾನ್ ಇಂಜಿನಿಯರ್ ಅವರು” ಎಂದು ಸರ್.ಎಂ.ವಿ. ಅವರ ಸಾಧನೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಲಯನ್ ಭೀಮಾನಂದ ನೆರವೇರಿಸಿದರು. ಸ್ವಾಗತವನ್ನು ಲಯನ್ಸ್ ಕ್ಲಬ್‌ನ ಪ್ರಥಮ ಉಪಾಧ್ಯಕ್ಷ ಲಯನ್ ಕೊರಿ ಶಿವಕುಮಾರ್ ನೆರವೇರಿಸಿದರು. ಕಾರ್ಯಕ್ರಮವನ್ನು ಲಯನ್ ಸಂತೋಷ್ ಕೆ.ಎಸ್. ನಿರೂಪಿಸಿದರು. ವಂದನಾರ್ಪಣೆಯನ್ನು ಲಯನ್ ಮಲ್ಲಿಕಾರ್ಜುನ ಎಸ್.ಕೆ. ಸಲ್ಲಿಸಿದರು.
ಸಮಾರಂಭದಲ್ಲಿ ಮಾಜಿ ಗವರ್ನರ್ ಲಯನ್ ಡಾ. ನಾಗಪ್ರಕಾಶ್, ಲಯನ್ ಬೆಳ್ಳೂಡಿ ಶಿವಕುಮಾರ್, ಲಯನ್ ವೆಂಕಟಚಲA, ಲಯನ್ ಟಿ.ಎಂ. ಪಂಚಾಕ್ಷರಯ್ಯ, ಈಶ್ವರಿ ಶಿವಕುಮಾರ್, ಲಯನ್ ಭೀಮಾನಂದ, ಲಯನ್ ಉದಯಕುಮಾರ್ ಸೇರಿದಂತೆ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.