ಜೇಸಿಐ ಉಡುಪಿ ಶಿವಳ್ಳಿ ನೇತೃತ್ವ ಮತ್ತು ಜೇಸಿಐ ಕಾಪು ಸಹಯೋಗದಲ್ಲಿ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

0
13

ಕಾಪು : ಸಮಾಜ ಸೇವಕ ಉದ್ಯಮಿ ಸಂಕೇತ್ ಆಚಾರ್ಯ ಅವರ ಸಹೃದಯ ಸಹಕಾರದೊಂದಿಗೆ ಅಕ್ಟೋಬರ್ 1 ರಂದು ಉಡುಪಿ ಜಿಲ್ಲೆಯ ಆತ್ರಾಡಿ, ಕಟಪಾಡಿ, ತೊಟ್ಟಂ, ಕೆಮ್ಮಣ್ಣು, ಪುತ್ತೂರು, ಇಂದ್ರಾಳಿ ಮತ್ತು ಕುಕ್ಕೆಹಳ್ಳಿ ಗ್ರಾಮಗಳ ಕೊರಗ ಸಮುದಾಯದ 20 ಮನೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಬ್ಯಾಗ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜೇಸಿಐ ಉಡುಪಿ ಶಿವಳ್ಳಿ ಘಟಕದ ಅಧ್ಯಕ್ಷ ವಿನೋದ್ ಶೆಟ್ಟಿ, ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು, ಜೇಸಿಐ ಉಡುಪಿ ಶಿವಳ್ಳಿ ಘಟಕದ ಉಪಾಧ್ಯಕ್ಷ ದಿನೇಶ್ ಪೂಜಾರಿ, ಆಶಾ ಚಂದ್ರಶೇಖರ್ ಮತ್ತು ಭವಿಶ್ ಶಾಮ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.