ಪೆರ್ಮುಡ ಶಾಲೆಯಲ್ಲಿ ಪರಿಸರ ಜಾಗೃತಿ : ಶಾಲೆಯ ಹೊರಾಂಗಣದಲ್ಲಿ ಗಿಡ ನಾಟಿ ಕಾರ್ಯಕ್ರಮ

0
34

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಗುರುವಾಯನಕೆರೆ ಮಹಾಲಿಂಗೇಶ್ವರ್ ಶೌರ್ಯ ವಿಪತ್ತು ಘಟಕ,ಗರ್ಡಡಿ ವಲಯ ಹಾಗೂ ಸ ಹಿ ಪ್ರಾ ಶಾಲೆ ಪೆರ್ಮುಡ ಸಹಕಾರದೊಂದಿಗೆ ಶಾಲೆಯ ಹೊರಾಂಗಣ ದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ವೇಣೂರು ಸಿಎ ಬ್ಯಾಂಕಿನ ಉಪಾಧ್ಯಕ್ಷರಾದ ರತ್ನಾಕರ ಬಿ ರವರು ಚಾಲನೆ ನೀಡಿ ಮಾತನಾಡಿ ಶಾಲಾ ಹಂತದಲ್ಲೇ ಮಕ್ಕಳಿಗೆ ಸಸಿ ನೆಡುವ ಹಾಗೂ ಪೋಷಿಸುವ ಅಭ್ಯಾಸವನ್ನು ಬೆಳೆಸಿದರೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಅವರು ಜೀವನಪರ್ಯಂತ ಅಳವಡಿಸಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಅರಣ್ಯ ನಾಶ ಹಾಗೂ ಹವಾಮಾನ ವೈಪರಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಶೌರ್ಯ ವಿಪತ್ತು ಘಟಕ ಸಂಯೋಜಕರು ಹಾಗೂ ಸ್ವಯಂಸೇವಕರು ಊರಿನವರ ಜೊತೆ ಸೇರಿ ಶಾಲಾ ಹೊರಾಂಗಣ ಸ್ವಚ್ಛತೆ ಹಾಗೂ ವಿವಿಧ ಹಣ್ಣಿನ ಗಿಡ ಗಳನ್ನು ನಾಟಿ ಮಾಡಿದರು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಯಶೋಧ,ಕೃಷಿ ಮೇಲ್ವಿಚಾರಕರು ಕೃಷ್ಣ, ವಲಯ ಒಕ್ಕೂಟದ ಅಧ್ಯಕ್ಷರು ವರದ ರಾಜ ಕುಲಾಲ್, ನೀಟ್ಟಡೆ/ಪೆರ್ಮುಡ ಒಕ್ಕೂಟದ ಅಧ್ಯಕ್ಷರು ಕರುಣಾಕರ ಹಾಗೂ ಪ್ರಕಾಶ್ SDMC ಅಧ್ಯಕ್ಷರು ಹರೀಶ್ ಶಾಲಾ ಮುಖ್ಯ ಶಿಕ್ಷಕಿ ಅರುಣಾ,ಅರಣ್ಯ ಇಲಾಖೆ ಅಧಿಕಾರಿ ವಸಂತ, ಸೇವಾಪ್ರತಿನಿಧಿ ವನಿತಾ ಹಾಗೂ ಪಿ ಜಯಂತಿ, ಪ್ರಮೀಳಾ ಶೌರ್ಯ ವಿಪತ್ತು ಘಟಕದ ಎಲ್ಲಾ ಸ್ವಯಂ ಸೇವಕರು ಹಾಗೂ ಶಾಲಾಸಹಶಿಕ್ಷಕರು, ಒಕ್ಕೂಟದ ಸದಸ್ಯರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here