ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಡಾ ಚೂಂತಾರು

0
37

ವನಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತ ವಾಗಬಾರದು. ಗಿಡ ನೆಟ್ಟು ಪೋಷಿಸಿ ಪರಿಸರ ಉಳಿಸಲು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಹಸಿರು ಇದ್ದರೆ ಉಸಿರು. ಹಸಿರು ಇಲ್ಲವಾದಲ್ಲಿ ಜೀವನ ದುಸ್ತರ ವಾಗಬಹುದು ಎಂದು ದ ಕ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಮಾಜಿ ಸಭಾಪತಿ ಗಳಾದ ಡಾ ಮುರಲಿ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.

ರೋಟರಿ ಕ್ಲಬ್ ಮಂಗಳೂರು ಹಿಲ್ ಸೈಡ್ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಅಶೋಕ ನಗರ ಇವರು ಸಂಯುಕ್ತ ಆಶ್ರಯದಲ್ಲಿ ಅಂತ ರಾಷ್ಟ್ರೀಯ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ಲಯನ್ ಅಶೋಕಾ ಸೇವಾ ಮಂದಿರ ಇದರ ಆವರಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಲಯನ್ ಅಶೋಕಾ ಸೇವಾ ಮಂದಿರದ ಟ್ರಸ್ಟಿ ಲಯನ್ ಡಾ ನವೀನ್ ಶೆಟ್ಟಿ, ರೋಟರಿ ಕ್ಲಬ್ ಹಿಲ್ ಸೈಡ್ ಇದರ ಅಧ್ಯಕ್ಷರಾದ ಪೀಟರ್ ಆಂಟೋನಿ ಪಿಂಟೋ,ಕಾರ್ಯದರ್ಶಿ ವಾಸುದೇವ ಶೆಟ್ಟಿಗಾರ್ ಮತ್ತು ರೆಡ್ ಕ್ರಾಸ್ ಸದಸ್ಯ ಶ್ರೀ ಅಜಯ್ ಹಾಜರಿದ್ದರು. ಸುಮಾರು 10 ಹಣ್ಣಿನ ಗಿಡಗಳನ್ನು ನೆಡಲಾಯಿತು.

LEAVE A REPLY

Please enter your comment!
Please enter your name here