ವಿದುಷಿ ಡಾ. ಶ್ರುತಿ ಆರ್ ಬೆಳ್ಳೂರು ರವರಿಗೆ ಸನ್ಮಾನ

0
6

ಪುತ್ತೂರು : ತಾಲೂಕು ಯುವಜನ ಪ್ರಶಸ್ತಿ ಪುರಸ್ಕೃತ ಶ್ರೀ ಕೃಷ್ಣ ಯುವಕ ಮಂಡಲ (ರಿ.), ಪುತ್ತೂರು ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ,ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ.) ಪುತ್ತೂರು ವತಿಯಿಂದ ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯಲ್ಲಿ ಡಾ. ಶ್ರುತಿ ಆರ್. ಬೆಳ್ಳೂರು ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದುಷಿ ಡಾ. ಶ್ರುತಿ ಆರ್ ಬೆಳ್ಳೂರುರವರು ಮಂಗಳೂರಿನ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದು ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯಲ್ಲಿ ಭಾರತೀಯ ನೃತ್ಯ ಕಲಾ ಶಾಲೆಯ ನೃತ್ಯ ಗುರುವಾಗಿ ಶಿಕ್ಷಣ ನೀಡುತ್ತಿದ್ದಾರೆ.

ಮುಖ್ಯ ಅತಿಥಿಯಾಗಿ ಶಾಂತಾ ಪುತ್ತೂರು ಸರ್ಕಾರಿ ಪ್ರೌಢಶಾಲೆ ಕಬಕದ ಸಾಹಿತಿ, ಶಿಕ್ಷಕಿ ಸನ್ಮಾನ ಪತ್ರ ವಾಚಿಸಿದರು.ಭರತ ನಾಟ್ಯವು ವ್ಯಕ್ತಿತ್ವ ವಿಕಸನ , ಸಂಸ್ಕೃತಿ ರಕ್ಷಣೆ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ.ಇಂತಹ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಡಾ. ಶೃತಿ ಆರ್ ಬೆಳ್ಳೂರುರವರ ಕಾರ್ಯ ಶ್ಲಾಘನೀಯ ಎಂದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಸೇವಕ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನ ನವೀನ್ ಸಿಟ್ಟಿಗುಡ್ಡೆ ಪುತ್ತೂರು ಧನ್ಯವಾದವಿತ್ತರು.

ವಿದುಷಿ ಡಾ. ಶೃತಿ ಬೆಳ್ಳೂರುರವರ , ಪತಿ ಶ್ರೀಯುತ ರೋಶನ್ ಬೆಳ್ಳೂರು,ಅವರ ಮಕ್ಕಳು,ಹಾಗೂ ಶಿಷ್ಯವೃಂದ, ವಿದುಷಿ ಡಾ.ಗಾನ ಪಿಲಿಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here