ಹೆಬ್ರಿ ತಾಲೂಕಿನಲ್ಲಿ ಮೊದಲ ಗ್ಯಾರಂಟಿ ಅದಾಲತ್ : ನಾಡ್ಪಾಲು ಗ್ರಾಮದಲ್ಲಿ ಕಾರ್ಯಕ್ರಮ

0
29

ನಾಡ್ಪಾಲಿನಲ್ಲಿ ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಮೊದಲ ಅದಾಲತ್ ,ಬಡವರ ಕಷ್ಟಗಳಿಗೆ ಸ್ಪಂದಿಸುವುದು ಕೂಡ ಅಭಿವೃದ್ಧಿ : ಉದಯ ಕುಮಾರ್‌ ಶೆಟ್ಟಿ.

ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ವತಿಯಿಂದ ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಮೊದಲ ಗ್ಯಾರಂಟಿ ಅದಾಲತ್‌ ನಲ್ಲಿ ಜಿಲ್ಲಾ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಮಾತನಾಡಿದರು.

ಹೆಬ್ರಿ : ರಸ್ತೆ ಸೇತುವೆ ಮಾಡುವುದು ಮಾತ್ರ ಅಭಿವೃದ್ಧಿಯಲ್ಲ, ಬಡವರ ಕಷ್ಟಗಳಿಗೆ ಸ್ಪಂದಿಸುವುದು ಕೂಡ ಅಭಿವೃದ್ಧಿ, ಅದು ನಮ್ಮ ಉದ್ದೇಶ, ಅರ್ಹರಾದ ಎಲ್ಲರಿಗೂ ಯೋಜನೆಗಳು ತಲುಪಬೇಕು ಎಂದು ಗ್ಯಾರಂಟಿ ಯೋಜನೆಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಅವರು ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ವತಿಯಿಂದ ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಮೊದಲ ಗ್ಯಾರಂಟಿ ಅದಾಲತ್‌ ನಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಘೋಷಿಸಿದ ಪ್ರಣಾಳಿಕೆಯಂತೆ ಪಂಚಗ್ಯಾರಂಟಿ ಯೋಜನೆಯನ್ನು ಅನುಷ್ಠನಗೊಳಿಸಿ ನುಡಿದಂತೆ ನಡೆದಿದೆ. ಕಾರ್ಕಳ ಕ್ಷೇತ್ರದ ಬಡವರ ಕಲ್ಯಾಣಕ್ಕೆ ೪೦೦ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಯ ಮೂಲಕ ವಿನಿಯೋಗಿಸಿದೆ, ಜನ ಹಸಿದ ಹೊಟ್ಟೆಯಲ್ಲಿ ಬದುಕಬಾರದು ಎಂದು ಕಾಂಗ್ರೆಸ್‌ ಉದ್ದೇಶ, ಬಿಜೆಪಿಯು ಜನರ ಬದುಕಿಗೆ ಯಾವೂದೇ ಯೋಜನೆ ನೀಡಿಲ್ಲ ಕಾಂಗ್ರೆಸ್‌ ಜನರ ಬದುಕು ಭದ್ರಪಡಿಸುವ ಕಾರ್ಯವನ್ನು ಅಂದಿನಿಂದಲೂ ಮಾಡುತ್ತ ಬಂದಿದೆ. ೯೯ ಶೇಕಡ ಜನರಿಗೆ ಗ್ಯಾರಂಟಿ ಯೋಜನೆಯು ತಲುಪುತ್ತಿದೆ ಎಂದು ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಸೇರಿಗಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧಿಕಾರಿಗಳು ಕೈಜೋಡಿಸಿದಾಗ ಗ್ಯಾರಂಟಿ ಯೋಜನೆಯು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಎಲ್ಲರಿಗೂ ತಲುಪುತ್ತದೆ. ಐಟಿಜಿಎಸ್ಟಿ ಸಮಸ್ಯೆಯಿಂದಾಗಿ ಕೆಲವರಿಗೆ ತೊಡಕಾಗಿದೆ. ಇನ್ನುಳಿದ ಎಲ್ಲ ಅರ್ಹರಿಗೂ ಯೋಜನೆಗಳು ತಲುಪುತ್ತಿವೆ. ಎಲ್ಲರ ಸಹಕಾರದಿಂದ ಹೆಬ್ರಿ ತಾಲ್ಲೂಕಿನ ಮೊದಲು ಅದಾಲತ್‌ ನಾಡ್ಪಾಲಿನಲ್ಲಿ ಯಶಸ್ವಿಯಾಗಿದೆ ಎಂದರು.

ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಹೆಬ್ರಿ ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ್‌ ರಾವ್‌ ಮಾತನಾಡಿ ತಾಂತ್ರಿಕ ಸಮಸ್ಯೆಯ ಹೊರತು ಹೆಬ್ರಿ ತಾಲ್ಲೂಕಿನಲ್ಲಿ ಎಲ್ಲರಿಗೂ ಯೋಜನೆಯ ಪ್ರಯೋಜನ ತಲುಪುತ್ತಿದೆ. ಯಾವೂದೇ ಸಮಸ್ಯೆಗಳಿದ್ದರೂ ಅದಾಲತ್‌ ನಲ್ಲಿ ಬಗೆಹರಿಸಲಾಗುತ್ತದೆ. ಹೆಬ್ರಿ ತಾಲ್ಲೂಕಿನಲ್ಲಿ ೨೦೨೩ರಿಂದ ೨೦೨೬ ರ ತನಕ ೬೧ ಜೋಟಿ ರೂಪಾಯಿಗೂ ಹೆಚ್ಚು ಹಣವನ್ನು ಗ್ಯಾರಂಟಿ ಯೋಜನೆಯಲ್ಲಿ ಜನತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯ ಪ್ರವೀಣ್‌ ಸೂಡ ಮಾತನಾಡಿ ಸಿದ್ಧರಾಮಯ್ಯ ಸರ್ಕಾರ ಗ್ಯಾರಂಟಿ ಮೂಲಕ ಬಡವರ ಬದುಕು ಸುಭದ್ರಗೊಳಿಸಿದೆ ಎಂದರು.

ಮೆಸ್ಕಾಂ ಹೆಬ್ರಿಯ ಕರ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರತಿ ಶೆಟ್ಟಿ, ಆಹಾರ ಇಲಾಖೆ ನಿರೀಕ್ಷಕ ಗುರುಪ್ರಸಾದ್‌, ಜಿಲ್ಲಾ ಉದ್ಯೋಗ ಇಲಾಖೆಯ ಪ್ರರ್ಥ್ವಿರಾಜ್‌ ಮಾತನಾಡಿದರು. ಹೆಬ್ರಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್‌, ನಾಡ್ಪಾಲು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಯಾದ ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ, ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ಪ್ರವೀಣ್‌ ಸೂಡ, ಜಗದೀಶ ಹೇರಳೆ, ಶಶಿಕಲಾ ಆರ್‌ಪಿ, ವಸಂತ್‌, ರಾಜು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀತಲ್‌ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಕಾರ್ಯದರ್ಶಿ ದೇವಕಿ ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.

LEAVE A REPLY

Please enter your comment!
Please enter your name here