ವರದಿ ರಾಯಿ ರಾಜ ಕುಮಾರ.
ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ನಡೆದ ‘ಪಾಲ್ದಾಟ್ಟೆಡ್ ಬಂಟೆರೆ ಪರ್ಬ – 2025’ ರಾಷ್ಟ್ರೀಯ ಮಟ್ಟದ ಬಂಟರ ಕಲಾವೈಭವ ಸ್ಪರ್ಧೆಯಲ್ಲಿ ಮೂಡುಬಿದಿರೆ ಬಂಟರ ಸಂಘ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಬಜಪೆಯಲ್ಲಿ ಜರುಗಿದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನಡೆದ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಒಟ್ಟು ಒಂಬತ್ತು ಬಲಿಷ್ಠ ತಂಡಗಳು ಭಾಗವಹಿಸಿದ್ದವು. ಬಂಟರ ಸಂಸ್ಕೃತಿಯನ್ನು ಬಿಂಬಿಸುವ ಅದ್ಭುತ ಪ್ರದರ್ಶನ ನೀಡಿದ ಮೂಡುಬಿದಿರೆ ತಂಡವು ತೀರ್ಪುಗಾರರ ಮೆಚ್ಚುಗೆ ಗಳಿಸಿತು. ಪ್ರಥಮ ಸ್ಥಾನ ಗಳಿಸಿದ ಮೂಡುಬಿದಿರೆ ಬಂಟರ ಸಂಘಕ್ಕೆ 1 ಲಕ್ಷ ರೂಪಾಯಿ ನಗದು ಹಾಗೂ ಆಕರ್ಷಕ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
.

