ಬೆಂಗಳೂರು: ನೀವು ವಿಮಾನ ಪ್ರಯಾಣವನ್ನು ಪ್ರೀತಿಸುತ್ತೀರಾ? ಹಾಗಾದರೆ ಇದೀಗ ನೀವು ಮಾಡುವ ನಿಮ್ಮ ದೈನಂದಿನ ಖರ್ಚುಗಳೇ ನಿಮ್ಮನ್ನು ಹೊಸ ಸ್ಥಳಗಳಿಗೆ ಕೊಂಡೊಯ್ಯಬಹುದು! ಹೇಗೆ ಅಂತೀರಾ?ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇಂಡಿಗೋ ಸಂಸ್ಥೆಗಳು ಒಟ್ಟಿಗೆ ಸೇರಿ ಇಂಡಿಗೋಏರ್‌ಲೈನ್ಸ್‌ನ ಹೊಸ ಲಾಯಲ್ಟಿ ಪ್ರೋಗ್ರಾಂ ಇಂಡಿಗೋ ಬ್ಲೂಚಿಪ್ ಮೂಲಕ ಕೋ-ಬ್ರಾಂಡೆಡ್ ಡಿಟ್ಕಾರ್ಡ್‌ಗಳ ಒಂದು ಆಕರ್ಷಕ ಶ್ರೇಣಿಯನ್ನು ಮರು ಬಿಡುಗಡೆ ಮಾಡಿದೆ.
ನೀವು ಆಗಾಗ ಪ್ರಯಾಣಿಸುತ್ತಿರುವವರಾಗಿರಿ ಅಥವಾ ಮುಂದಿನ ಪ್ರವಾಸಕ್ಕೆ ಯೋಜನೆ ಮಾಡುತ್ತಿರುವರಾಗಿರಿ, ಈಕಾರ್ಡ್‌ಗಳು ನಿಮ್ಮ ದೈನಂದಿನ ಖರ್ಚನ್ನು ಪ್ರಯಾಣದ ರಿವಾರ್ಡ್‌ಗಳಾಗಿ ಪರಿವರ್ತಿಸಲಿವೆ.
ಎರಡು ಕಾರ್ಡ್‌ಗಳು, ಒಂದೇಗುರಿ
ಇಂಡಿಗೋ ಕೋಟಕ್ ಡಿಟ್ಕಾರ್ಡ್– ದೈನಂದಿನ ಬಳಕೆದಾರರಿಗೆ ಸೂಕ್ತವಾಗಿದ್ದು, ಪ್ರಯಾಣದ ಲಾಭಗಳೊಂದಿಗೆ ದೈನಂದಿನ ಸೌಕರ್ಯವನ್ನು ಬಯಸುವವರಿಗೆ ಈ ಕಾರ್ಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ವಾರ್ಷಿಕವಾಗಿ ₹ 6ಲಕ್ಷ ಖರ್ಚು ಮಾಡಿದರೆ, ಮೈಲ್ ಸ್ಟೋನ್ ಗಳು, ಪ್ರಯಾಣ, ಊಟ, ಮನರಂಜನೆ ಮತ್ತು ಇತರ ಖರ್ಚುಗಳ ಮೇಲೆತ್ತರದ ಕೊಡುಗೆಗಳನ್ನು ಒಳಗೊಂಡಂತೆ 30,000ಕ್ಕಿಂತ ಹೆಚ್ಚು ಬ್ಲೂಚಿಪ್ ಗಳಿಸಬಹುದು.
ಇಂಡಿಗೋ ಕೋಟಕ್ ಪ್ರೀಮಿಯಂ ಕ್ರೆಡಿಟ್ ಕಾರ್ಡ್– ಆಗಾಗ ಪ್ರಯಾಣಿಸುವವರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಈ ಕಾರ್ಡ್ ವಾರ್ಷಿಕವಾಗಿ ₹12 ಲಕ್ಷಕ್ಕಿಂತ ಹೆಚ್ಚು ಖರ್ಚಿನ ಮೇಲೆ 70,000ಕ್ಕಿಂತ ಹೆಚ್ಚು ಬ್ಲೂಚಿಪ್ ಇರುತ್ತದೆ. ವಿಶೇಷವಾಗಿ ನಿಮ್ಮ ದೈನಂದಿನ ಖರ್ಚನ್ನುನಿಮ್ಮಇಷ್ಟದ ರಜೆಯ ತಾಣಗಳಿಗೆ ರಿಟರ್ನ್ ಟಿಕೆಟ್ ಗಳಾಗಿ ಪರಿವರ್ತಿಸುತ್ತದೆ.

![Kotak_x_Indigo_Ashok_Vaswani,_MD_&_CEO,_Kotak_Mahindra_Bank,_and_Pieter_Elbers,_CEO,_IndiGo_(1)[1]](https://tulunaduvarthe.com/wp-content/uploads/2025/07/Kotak_x_Indigo_Ashok_Vaswani_MD__CEO_Kotak_Mahindra_Bank_and_Pieter_Elbers_CEO_IndiGo_11-696x471.webp)