ಆಹಾರ ಪ್ರಿಯರ ಫೇವರಿಟ್ ಕೊಂಕಣಿ ಸ್ಟೈಲ್ ‘ಅಂಬಾಟ ಬಟಾಟ’: ಬಾಯಲ್ಲಿ ನೀರೂರಿಸುವ ಸಾಂಪ್ರದಾಯಿಕ ರೆಸಿಪಿ!

0
16

ಕೊಂಕಣಿ ಅಡುಗೆಗಳ ವಿಶೇಷ ರುಚಿ ಎಂದರೆ ತೆಂಗಿನಕಾಯಿ ಮಸಾಲೆ, ತುಪ್ಪದ ಸುವಾಸನೆ ಮತ್ತು ಖಾರದ ಸವಿಯ ಅದ್ಭುತ ಸಂಯೋಜನೆ. ಅಂತಹ ಸಾಂಪ್ರದಾಯಿಕ ರೆಸಿಪಿಗಳಲ್ಲಿ ಒಂದಾದ ‘ಅಂಬಾಟ ಬಟಾಟ’ ಈಗಲೂ ಅನೇಕ ಮನೆಗಳಲ್ಲಿ ಫೇವರಿಟ್ ಕರ್ರಿಯಾಗಿದೆ. ಆಲೂಗಡ್ಡೆ ಮತ್ತು ತೆಂಗಿನಕಾಯಿ ಮಸಾಲೆಯಿಂದ ತಯಾರಾಗುವ ಈ ಖಾದ್ಯ ಅನ್ನ, ದೋಸೆ ಅಥವಾ ಚಪಾತಿಯ ಜೊತೆ ಅದ್ಭುತ ರುಚಿ ನೀಡುತ್ತದೆ.

ಇದೀಗ ಮನೆಯಲ್ಲೇ ಸುಲಭವಾಗಿ ಮಾಡುವ ಕೊಂಕಣಿ ಶೈಲಿಯ ಅಂಬಾಟ ಬಟಾಟ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

  • ತೆಂಗಿನಕಾಯಿ ತುರಿ – 1 ಕಪ್
  • ಆಲೂಗಡ್ಡೆ – 4
  • ಮೆಂತ್ಯೆ – ½ ಟೀ ಸ್ಪೂನ್
  • ಜೀರಿಗೆ – 1 ಟೀ ಸ್ಪೂನ್
  • ಧನಿಯಾ – 1 ಟೀ ಸ್ಪೂನ್
  • ಕಾಳುಮೆಣಸು – 4
  • ಇಂಗು – ½ ಟೀ ಸ್ಪೂನ್
  • ಕರಿಬೇವು – 10 ರಿಂದ 12 ಎಲೆ
  • ಅರಿಶಿನ ಪುಡಿ – ½ ಟೀ ಸ್ಪೂನ್
  • ಅಚ್ಚ ಖಾರದ ಪುಡಿ – 1 ಟೀ ಸ್ಪೂನ್
  • ಹುಣಸೆಹಣ್ಣು – ಸಣ್ಣ ಬೆಳ್ಳುಳ್ಳಿ ಗಾತ್ರದಷ್ಟು
  • ಸಾಸಿವೆ – ½ ಟೀ ಸ್ಪೂನ್
  • ಅಡುಗೆ ಎಣ್ಣೆ – 2 ಟೀ ಸ್ಪೂನ್
  • ಕೋತಂಬರಿ ಸೊಪ್ಪು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಷ್ಟು

ಮಸಾಲೆ ತಯಾರಿಸುವ ವಿಧಾನ

ಮೊದಲಿಗೆ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಧನಿಯಾ, ಜೀereke, ಕಾಳುಮೆಣಸು ಮತ್ತು ಹುಣಸೆಹಣ್ಣು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಇನ್ನೊಂದು ಕಡೆ ಆಲೂಗಡ್ಡೆಯ ಸಿಪ್ಪೆ ತೆಗೆದು ಉದ್ದವಾಗಿ ಕತ್ತರಿಸಿ ಇಟ್ಟುಕೊಳ್ಳಿ. ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.

ಅಂಬಾಟ ಬಟಾಟ ಮಾಡುವ ವಿಧಾನ

  1. ಗ್ಯಾಸ್ ಮೇಲೆ ಬಾಣಲೆ ಇಟ್ಟು ಎಣ್ಣೆ ಬಿಸಿ ಮಾಡಿಕೊಳ್ಳಿ.
  2. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ ಹಾಕಿ ತಾಳಿಸಿ.
  3. ನಂತರ ಕರಿಬೇವು, ಇಂಗು, ಅರಿಶಿನ ಪುಡಿ ಮತ್ತು ಖಾರದ ಪುಡಿ ಸೇರಿಸಿ.
  4. ಈಗ ಕತ್ತರಿಸಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಕಲಸಿ ಮುಚ್ಚಳ ಮುಚ್ಚಿ 3–4 ನಿಮಿಷ ಬೇಯಿಸಿಕೊಳ್ಳಿ.
  5. ಬಳಿಕ ರುಬ್ಬಿದ ತೆಂಗಿನ ಮಸಾಲೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
  6. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ಮುಚ್ಚಳ ಹಾಕಿ 2 ನಿಮಿಷ ಕುದಿಸಿಕೊಳ್ಳಿ.
  7. ಕೊನೆಯಲ್ಲಿ ಕೋತಂಬರಿ ಸೊಪ್ಪು ಹಾಕಿ ಒಂದು ನಿಮಿಷ ಬೇಯಿಸಿದರೆ ಸುವಾಸನೆಯ ಕೊಂಕಣಿ ಸ್ಟೈಲ್ ಅಂಬಾಟ ಬಟಾಟ ಸಿದ್ಧ!

ಹೇಗೆ ಸವಿದರೆ ಹೆಚ್ಚು ರುಚಿ?

ಈ ಅಂಬಾಟ ಬಟಾಟವನ್ನು ಬಿಸಿ ಅನ್ನ, ತುಪ್ಪ, ದೋಸೆ ಅಥವಾ ಚಪಾತಿಯ ಜೊತೆಗೆ ಸವಿದರೆ ಅದ್ಭುತ ರುಚಿ ಸಿಗುತ್ತದೆ. ತುಸು ಹುಳಿ-ಖಾರ ಮಿಶ್ರಣದ ಈ ಸಾಂಪ್ರದಾಯಿಕ ಕರ್ರಿ ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುವಷ್ಟು ಟೇಸ್ಟಿಯಾಗಿರುತ್ತದೆ.

LEAVE A REPLY

Please enter your comment!
Please enter your name here