ಶತಮಾನದ ಹೆಜ್ಜೆಗುರುತು : ಮುಳ್ಳುಗುಡ್ಡೆ ಶಾಲೆಯ ಶತಮಾನೋತ್ಸವಕ್ಕೆ ಸಿದ್ಧತೆ

0
64

ವರದಿ : ಸುಕುಮಾರ್‌ ಮುನಿಯಾಲ್‌

ಮುಳ್ಳುಗುಡ್ಡೆ ಶಿವಪುರ ( ಹೆಬ್ರಿ ) : ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮದ ಮುಳ್ಳುಗುಡ್ಡೆ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಶತಮಾನೋತ್ಸವ ಸಂಭ್ರಮ. ಸರ್ವರ ಸಹಕಾರದಲ್ಲಿ ಶತಮಾನೋತ್ಸವದ ಸಂಭ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.

ಶತಮಾನೋತ್ಸವದಲ್ಲಿ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಯಲಿದೆ. ೧೯೨೫ರಲ್ಲಿ ಶಿವಪುರ ಗ್ರಾಮದ ಶಾನುಭೋಗರಾಗಿದ್ದ ಪಿ. ರಾಮರಾಯ ಶಾನುಭೋಗರು ಶಾಲೆಯನ್ನು ಸ್ಥಾಪಿಸಿದ್ದರು. ಸಾವಿರಾರು ಮಕ್ಕಳಿಗೆ ಗ್ರಾಮೀಣ ಪ್ರದೇಶದ ಶಾಲೆಯು ವಿದ್ಯಾರ್ಜನೆಯನ್ನು ನೀಡಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಮುಳ್ಳುಗುಡ್ಡೆಯಲ್ಲಿ ಅತ್ಯಂತ ವಿಶಾಲವಾದ ಸ್ಥಳದಲ್ಲಿ ಶಾಲೆಯಿದ್ದು ೨ ಕಟ್ಟಡಗಳು ಸುಣ್ಣಬಣ್ಣದಿಂದ ಆಲಂಕಾರಗೊಂಡು ಕಂಗೋಳಿಸುತ್ತಿದೆ.

ಶಾಲಾಡಳಿತ ಪರಿಷತ್‌ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶಿವಪುರದ ಮುಂದಾಳು ಮೂರ್ಸಾಲು ಮೋಹನದಾಸ ನಾಯಕ್‌ ನಿರಂತರವಾಗಿ ಶಾಲೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶಾಲಾಡಳಿತ ಪರಿಷತ್‌ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೂರ್ಸಾಲು ಮೋಹನದಾಸ ನಾಯಕ್‌ ನೇತ್ರತ್ವದಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗನ್ನಾಥ ಕುಲಾಲ್‌ ಶಿವಪುರ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಿವೃತ್ತ ಮುಖ್ಯ ಶಿಕ್ಷಕ ಮುರಳೀಧರ ಭಟ್‌ ಮತ್ತು ಶಾಲಾ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಸಮಿತಿಯ ಅಧ್ಯಕ್ಷರಾದ ಡಾ.ಗುರುಪ್ರಸಾದ ಕೊಡಂಚ ಸಹಕಾರದಲ್ಲಿ ಶತಮಾನೋತ್ಸವ ನಡೆಯುತ್ತಿದ್ದು ಸರ್ವರೂ ಕೈಜೋಡಿಸಿದ್ದಾರೆ.

ಊರಿನ ದಾನಿಗಳು, ಸಂಘಸಂಸ್ಥೆಗಳು, ಹಳೇ ವಿದ್ಯಾರ್ಥಿಗಳು, ಶಾಲಾಡಳಿತ ಪರಿಷತ್‌ ಮತ್ತು ವ್ಯವಸ್ಥಾಪನಾ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಾಲಾ ಶಿಕ್ಷಕ ರಕ್ಷಕ ಸಂಘ, ಶತಮಾನೋತ್ಸವ ಸಮಿತಿ, ಶಾಲಾ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಸಮಿತಿ, ಹಳೇ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಗೌರವ ಶಿಕ್ಷಕಿಯರು ಸಂಭ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಶಾಲಾ ಹಳೇ ವಿದ್ಯಾರ್ಥಿಗಳ ಕ್ರೀಡೋತ್ಸವ ಇತ್ತೀಚೆಗೆ ಸಂಪನ್ನಗೊಂಡಿದೆ. ಶಾಲೆಯ ನಿರಂತರ ಉಳಿವಿಗಾಗಿ ೧೦೦ ವರ್ಷಗಳ ಕಾಲ ಸೇವೆಸಲ್ಲಿಸಿದ ಮುಖ್ಯ ಶಿಕ್ಷಕರು, ಶಿಕ್ಷಕರು, ಜನಪ್ರತಿನಿಧಿಗಳು, ದಾನಿಗಳು, ಪೋಷಕರು, ಹಳೇ ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆ ಸೇರಿ ಹಲವರ ಸೇವೆಯ ಫಲವಿದೆ ಎಂದು ಮೋಹನದಾಸ ನಾಯಕ್‌ ಸ್ಮರಿಸಿದರು.
ಎಪ್ರಿಲ್‌ ೧೯ ರಂದು ಶತಮಾನೋತ್ಸವ ಸಂಭ್ರಮ : ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ.

ಮುಳ್ಳುಗುಡ್ಡೆ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಮತ್ತು ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಎಪ್ರಿಲ್‌ ೧೯ ರಂದು ನಡೆಯಲಿದೆ. ಮಧ್ಯಾಹ್ನ ೩ ಗಂಟೆಗೆ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ನಡೆಯಲಿದೆ. ಬಳಿಕ ಕಲ್ಲಡ್ಕ ವಿಠಲ ನಾಯಕ್‌ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಸಂಜೆ ೭ ಕ್ಕೆ ಶತಮಾನೋತ್ಸವ ಸಂಭ್ರಮ ನಡೆಯಲಿದೆ. ಊರಿನ ದಾನಿಗಳು, ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸುವರು. ಗುರುವಂದನೆ, ನಿವೃತ್ತ ಮುಖ್ಯ ಶಿಕ್ಷಕಿ ಬೇಬಿ ಹಾಗೂ ಸಾಧಕರು, ದಾನಿಗಳು ಮತ್ತು ಗೌರವ ಶಿಕ್ಷಕರಿಗೆ ಗೌರವ ಸಮರ್ಪಣೆ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳ ನೃತ್ಯೋತ್ಸವ, ಹಳೆ ವಿದ್ಯಾರ್ಥಿಗಳ ನೃತ್ಯ ವೈವಿಧ್ಯ ಬಳಿಕ ರಾತ್ರಿ ವಿನಯ ಬೇರೋಳ್ಳಿ ಅವರ ಸಂಯೋಜನೆಯಲ್ಲಿ ಯಕ್ಷರ್ಪಣ ಬೇರೋಳ್ಳಿ ಅವರ ತಂಡದಿಂದ ದಕ್ಷಿಣೋತ್ತರ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ರಾಮಾಂಜನೇಯ ಕಾಳಗ ಯಕ್ಷಗಾನ ನಡೆಯಲಿದೆ.

ಮಂಜುನಾಥ ಕುಲಾಲ್‌ ಶಿವಪುರ, ವಿಶ್ವನಾಥ ಪೂಜಾರಿ, ಸಚಿನ್‌ ನಾಯ್ಕ್‌ ಕುಬ್ರಿ, ಶಿಕ್ಷಕ ರಮಾನಂದ ಶೆಟ್ಟಿ, ವಿಶ್ವಾಸ್‌ ವೈಲಾಯ, ಎಸ್.ಕೃಷ್ಣ, ಸಂತೋಷ ಶೆಟ್ಟಿ, ಗಣೇಶ ಹಾಂಡ ಶಿವಪುರ ಮತ್ತು ಹಲವರು ನಿರಂತರವಾಗಿ ಶತಮಾನೋತ್ಸವ ಸಂಭ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಹಳೇ ವಿದ್ಯಾರ್ಥಿಗಳು, ನಮ್ಮೂರಿನ ದಾನಿಗಳು ಮತ್ತು ಸರ್ವರ ಸಹಕಾರದಿಂದಲೇ ಗ್ರಾಮೀಣ ಪ್ರದೇಶ ಶಿವಪುರ ಮುಳ್ಳುಗುಡ್ಡೆ ನಮ್ಮೂರಿನ ಶಾಲೆಯ ಶತಮಾನೋತ್ಸವ ವಿನೂತನವಾಗಿ ನಡೆಯಲಿದೆ ಎಂದು ಮುರ್ಸಾಲು ಮೋಹನದಾಸ ನಾಯಕ್‌ ತಿಳಿಸಿದರು.

LEAVE A REPLY

Please enter your comment!
Please enter your name here