ಮಂಗಳೂರು : ಇಲ್ಲಿನ ಬೋ ಳೂರು ಸಾವಿತ್ರಿ ವಾಸುದೇವ ರಾವ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಅಶೋ ಕನಗರ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಒಟ್ಟು 108 ವಿದ್ಯಾರ್ಥಿಗಳಿಗೆ ಪಾದರಕ್ಷೆಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವು ದಿನಾಂಕ 22 ಜೂನ್ 2026 ರಂದು ಶಾಲೆಯ ಆವರಣದಲ್ಲಿಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದಟ್ರಸ್ಟ್ ನ ಅಧ್ಯಕ್ಷರಾದ ಸಾವಿತ್ರಿ ವಾಸುದೇವ ರಾವ್ ಅವರು ವಿದ್ಯಾರ್ಥಿಗಳಿಗೆ ಪಾದರಕ್ಷೆಗಳನ್ನು ವಿತರಿಸಿ ಮಾತನಾಡಿದರು.
ಮಕ್ಕಳು ತಮಗೆ ದೊ ರೆತ ವಸ್ತುಗಳನ್ನು ಜಾಗರೂಕತೆಯಿಂದ ಸಂರಕ್ಷಿಸಬೇಕು ಎಂದು ಅವರು ಕರೆ ನೀಡಿದರು. ಅದರೊಂದಿಗೆ, ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಗಮನವನ್ನು ವಿದ್ಯಾಭ್ಯಾಸದ ಕಡೆಗೆ ಹರಿಸಿ, ಶೈಕ್ಷಣಿಕವಾಗಿ ಉನ್ನತ ಸಾಧನೆಗೈಯಬೇಕು ಎಂದು ಪ್ರೇರೇಪಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಜಾಯ್ಸ್ ಹೆನ್ರಿಟಾ ಅವರು ಟ್ರಸ್ಟ್ನ ಈ ನಿರಂತರ ಸೇವೆಯನ್ನು ಶ್ಲಾಘಿಸಿದರು. ಬೋ ಳೂರು ಸಾವಿತ್ರಿ ವಾಸುದೇವ ರಾವ್ ಚಾರಿಟೇಬಲ್ ಟ್ರಸ್ಟ್, ಸತತ ಮೂರನೇ ಬಾರಿಗೆ ಶಾಲೆಯ ಮಕ್ಕಳಿಗೆ ಈ ರೀತಿಯ ಉದಾರ ನೆರವು ನೀಡುತ್ತಿರುವುದನ್ನು ಸ್ಮರಿಸಿದ ಅವರು, ಟ್ರಸ್ಟ್ ಹಾಗೂ ಎಲ್ಲಾಟ್ರಸ್ಟೀಗಳಿಗೆ
ಶಾಲೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಲವು ವಿದ್ಯಾರ್ಥಿಗಳು, ತಮಗೆ ನೀಡಲಾದ ವಸ್ತುಗಳನ್ನು ಸದ್ಬಳಕೆ ಮಾಡಿಕೊಂಡು, ಪರಿಶ್ರಮದಿಂದ ವ್ಯಾಸಂಗ ಮಾಡುವುದಾಗಿ ಭರವಸೆ ನೀಡಿದರು. ಟ್ರಸ್ಟೀ ಜೇಷ್ಠಲಕ್ಷ್ಮೀ ಬೋ ಳೂರು ಅವರು ಸಮಾರಂಭವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಟ್ರಸ್ಟೀಗಳಾದ ರಾಮ್ ವಿ. ರಾವ್ ಮತ್ತುಶ್ರೀ ಚಂದ್ರೇಶ್ ರಾವ್ ಅವರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

