ವಿಶ್ವ ಕೊಂಕಣಿ ಕೇಂದ್ರ ದ 5 ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ

0
9

ಉಡುಪಿ : 2026  ನೇ ಸಾಲಿನ  “ವಿಮಲಾ ವಿ ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ್”: (ಪ್ರಶಸ್ತಿ 1ಕೊಂಕಣಿ ಭಾಷೆಶಿಕ್ಷಣಕಲೆಸಂಸ್ಕೃತಿಯ ಬೆಳವಣಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟು ದುಡಿದ ಓರ್ವ ಕೊಂಕಣಿ ಹಿರಿಯ ನಾಗರಿಕರಿಗೆ ಕೊಡಮಾಡುವ ” ವಿಮಲಾ ವಿ ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ್” ಪ್ರಶಸ್ತಿಗೆ  ಅರ್ಜಿಗಳನ್ನು ಆಹ್ವಾನಿಸಲಾಗಿದೆ.

“ವಿಮಲಾ ವಿ ಪೈ ವಿಶ್ವ ಕೊಂಕಣಿ ಸಾಹಿತ್ಯ ಕೃತಿ (ಪ್ರಶಸ್ತಿ 2) ಮತ್ತು ಕವಿತಾ ಕೃತಿ ಪುರಸ್ಕಾರ” (ಪ್ರಶಸ್ತಿ 3) :

ಜನವರಿ-1, 2023 ರಿಂದ ಡಿ 31, 2025  ರ ಅವಧಿಯಲ್ಲಿ ಪ್ರಕಟಗೊಂಡ ಕೊಂಕಣಿ  ದೇವನಾಗರಿ ಲಿಪಿಯ ಒಂದು ಸಾಹಿತ್ಯ ಕೃತಿ (ಗದ್ಯ) ಮತ್ತು ಒಂದು ಕವಿತಾ ಕೃತಿಗಳ  ಹೆಸರನ್ನು ಸೂಚಿಸಿ, ಅರ್ಜಿ ಆಹ್ವಾನಿಸಲಾಗಿದೆ. ಕೃತಿಗಳು ಅನುವಾದಿತ  ಅಥವಾ ಶಿಕ್ಷಣಾಧ್ಯಯನಕ್ಕೆ ಸಂಬಂಧಿಸಿದವುಗಳಾಗಿರಬಾರದು.  

“ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ್” (ಪ್ರಶಸ್ತಿ 4 & ಪ್ರಶಸ್ತಿ 5)ಮೂಲತ ಕೊಂಕಣಿ ಭಾಷಿಕರಾಗಿದ್ದು ಶಿಕ್ಷಣ, ಸಾರ್ವಜನಿಕಆಡಳಿತ, ಸಮಾಜ ಸೇವೆ, ಆರೊಗ್ಯ ಸೇವೆ, ವಿಜ್ಞಾನಪತ್ರಿಕೋದ್ಯಮಪ್ರದರ್ಶನ ಕಲೆ,  ಮಾನವಿಕ ಸೇವೆಗಳು, ವಾಣಿಜ್ಯೋದ್ಯಮಕ್ರೀಡೆಇತ್ಯಾದಿ ಕ್ಷೇತ್ರದಲ್ಲಿ ಉನ್ನತಪ್ರಮಾಣದ ಪ್ರಾಮಾಣಿಕ ಸೇವೆ ನೀಡಿರುವ ವ್ಯಕ್ತಿ ಅಥವಾ ಸಂಘ ಸಂಸ್ಥೆ-ಸಂಘಟನೆಗಳಿಗೆ ಬೇರೆ ಬೇರೆಯಾಗಿ,  “ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ” ಪ್ರಶಸ್ತಿಗಳಿಗೆ ಸಾರ್ವಜನಿಕರು ಹೆಸರು ಸೂಚಿಸುವಂತೆ ಕೇಳಿಕೊಳ್ಳಲಾಗಿದೆ.

ಈ ಐದೂ ಪ್ರಶಸ್ತಿಗಳು ತಲಾ ಒಂದು ಲಕ್ಷ ರೂಪಾಯಿ ನಗದು ಹಾಗೂ ಸನ್ಮಾನ ಪತ್ರ, ಫಲಕಗಳನ್ನು ಒಳಗೊಂಡಿದ್ದು, ವಿಶ್ವ ಕೊಂಕಣಿ ಕೇಂದ್ರದ ಮಹಾಪೋಷಕರಾದ ಶ್ರೀ ಟಿ ವಿ ಮೊಹನದಾಸ್ ಪೈಯವರ ಮಾತೃಶ್ರೀ ವಿಮಲಾ ವಿ ಪೈ ಇವರ ಸ್ಮರಣಾರ್ಥ ಕೊಡಲಾಗುತ್ತಿದೆ.

ಆಸಕ್ತ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದ ವೆಬ್ ಸೈಟ್ www.vishwakonkani.org ನಿಂದ ಮಾಹಿತಿ ಪಡೆದು ದಿನಾಂಕ 31-08-2026 ರ ಒಳಗಾಗಿ  ಆನ್-ಲೈನ್ ರೂಪದಲ್ಲಿ ನಾಮನಿರ್ದೇಶನ ನೊಂದಾಯಿಸಿಕೊಂಡು, ಈ ಬಗ್ಗೆ ಸಲ್ಲಿಸುವ ಭಾವಚಿತ್ರಪ್ರಶಂಸಾ ಪತ್ರ ಹಾಗೂ ಸಾಹಿತ್ಯ ಕೃತಿ ಮತ್ತು ಕವಿತಾ ಕೃತಿ ಪುಸ್ತಕಗಳು ಇತ್ಯಾದಿ ಎಲ್ಲಾದಾಖಲೆಗಳನ್ನು ನೇರವಾಗಿ ಅಂಚೆ ಮೂಲಕ ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು-575016 ಕಳುಹಿಸಿ ಕೊಡಬೇಕಾಗಿ ಕೋರಲಾಗಿದೆ.  

LEAVE A REPLY

Please enter your comment!
Please enter your name here