ಕೃಷ್ಣ ಜನ್ಮಾಷ್ಠಮಿ: ನಾಗರಿಕ ಸಮಿತಿಯಿಂದ 10 ಸಾವಿರ ಚಕ್ಕುಲಿ ವಿತರಣೆ

0
4

ಉಡುಪಿ : ಕೃಷ್ಣ ಜನ್ಮಾಷ್ಟಮಿಯ ಸಂದರ್ಬದಲ್ಲಿ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸವಿ ನೆನಪಿಗಾಗಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಪ್ರತೀ ವರ್ಷ ಸಾರ್ವಜನಿಕರಿಗೆ ಉಚಿತ ಚಕ್ಕುಲಿ ವಿತರಣೆ ಹಮ್ಮಿಕೊಳ್ಳುತ್ತಿದೆ. ನಾಗರಿಕ ಸಮಿತಿಯ ಕಚೇರಿ ಮುಂಭಾಗದಲ್ಲಿ ಗಣ್ಯರ ಸಮ್ಮುಖದಲ್ಲಿ ಚಕ್ಕುಲಿ ವಿತರಣೆ ಚಾಲ ನೆ ನಿಡಲಾಯಿತು. ಈ ಸಂದರ್ಬದಲ್ಲಿ ಮಾತನಾಡಿದ ಲಕ್ಷೀವರ ತೀರ್ಥ ಶ್ರೀಪಾದರ ಸಹೋದರ ಲಾತವ್ಯ ಆಚಾರ್ಯ ನಾಗರಿಕ ಸಮಿತಿ ಹಲವಾರು ವರ್ಷಗಳಿಂದ ಚಕ್ಕುಲಿಯನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಅಕ್ಷಮಿ ಹಬ್ಬವನ್ನು ಸ್ಮರಣೀಯವನ್ನಾಗಿಸುತ್ತಿದೆ ಎಂದರು.

ಸಹಕಾರಿ ಧುರೀಣ, ಸಹಕಾರ ರತ್ನ ಜಯಕರಶೆಟ್ಟಿ ಇಂದ್ರಾಳಿ ಈ ಸಂದರ್ಬದಲ್ಲಿ ಮಾತನಾಡಿ ನಿತ್ಯಾನಂದ ಒಳಕಾಡುವ ಅವರ ಸಮಾಜ ಸೇವೆಗಳು ಜನ ಮಾನಸದಲ್ಲಿ ಉಳಿಯುತ್ತದೆ. ಅವರ ಪ್ರತಿಯೊಂದು ಕೆಲಸವೂ ಸಹ ವಿಭಿನ್ನ ಆಗಿರುತ್ತದೆ. ಅವರ ಈ ಕಾರ್ಯ ಮುಂದೆಯೂ ನಡೆಯಲಿ ಎಂದು ಹಾರೈಸಿದರು.

ನಾಗರಿಕ ಸಮಿತಿಯ ಅದ್ಯಕ್ಷ ನಾಗೇಶ್ ಹೆಗ್ಡೆ ಅವರು ಈ ಸಂದರ್ಬದಲ್ಲಿ ಮಾತನಾಡಿದರು. ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಬದಲ್ಲಿ ಉದ್ಯಮಿ ಭಾಸ್ಕರ್ ಶೇರಿಗಾರ್, ಗೀತಾ ನಾಗೇಶ್ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ವಿಕಾಶ್ ಶೆಟ್ಟಿ, ಗಂಗಾಧರ್ , ವಾಸುದೇವ , ಶಂಕರ್ ನಾಯಕ್, ಸುಮಾ ಆಚಾರ್, ದೇವಕಿ ಬಾರ್ಕೂರು ಮುಂತಾದವರು ಉಪಸ್ಥಿತರಿದ್ದರು. ಬಳಿಕ ಸುಮಾರು ೧೦ ಸಾವಿರ ಚಕ್ಕುಲಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಶಂಕರ್ ನಾಯಕ್ ಅವರ ತಂಡ ಸ್ಥಳದಲ್ಲೇ ಚಕ್ಕುಲಿ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿದರು.