ಈಶ್ವರ್ ಮಲ್ಪೆ ಇವರ ಸಹಯೋಗದಲ್ಲಿ ಉಚಿತ ಕಿವಿ ತಪಾಸಣಾ ಹಾಗೂ ರಿಯಾಯತಿ ದರದಲ್ಲಿ ಶ್ರವಣಯಂತ್ರ ವಿತರಣಾ ಕಾರ್ಯಕ್ರಮ

0
83

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಈಶ್ವರ್ ಮಲ್ಪೆ ಇವರ ಸಹಯೋಗದಲ್ಲಿ ಉಚಿತ ಕಿವಿ ತಪಾಸಣಾ ಹಾಗೂ ರಿಯಾಯತಿ ದರದಲ್ಲಿ ಶ್ರವಣಯಂತ್ರ ವಿತರಣಾ ಕಾರ್ಯಕ್ರಮ ನೆರವೇರಿತು.
ಈಶ್ವರ್ ಮಲ್ಪೆ ಟೀಮ್ ನವರುದೇಣಿಗೆ ಮೊತ್ತದಿಂದ 40% ಶ್ರವಣ ಸಾಧನದ ಮೊತ್ತವನ್ನು ಪಾವತಿಸಿದ್ದಾರೆ
ಸುಮಾರು 35ಜನರು ಈ ಚಿಕಿತ್ಸೆ ಪಡೆದು 15 ಜನ ಫಲಾನುಭವಿಗಳಿಗೆ ಶ್ರವಣಯಂತ್ರ ವಿತರಿಸಲಾಯಿತು
ಈ ಸಂದರ್ಭದಲ್ಲಿ ಪರ್ಯಾಯ ಉಭಯ ಶ್ರೀಪಾದರು ಭೇಟಿ ನೀಡಿ.

ಈಶ್ವರ್ ಮಲ್ಪೆ ಅವರ ಈ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಠದ ದಿವಾನರಾದ ನಾಗರಾಜ ಆಚಾರ್ಯ, ರತೀಶ ತಂತ್ರಿ, ಹಾಗೂ ಶ್ರವಣ ತಜ್ಞೆ ಡಾ.ಅಂಕಿತಾ ಕಲ್ಮಾಡಿ, ಈಶ್ವರ್ ಮಲ್ಪೆ ಟೀಮ್ ನ ಸಂಯೋಜಕ ಲವ ಬಂಗೇರ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here