ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿ, ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆ, ಡಾಕ್ಟರ್ಸ ಅಸೋಸಿಯೇಷನ್, ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಸಹಕಾರ ಸಪ್ತಾಹ ಸಂಭ್ರಮ ಸಂದರ್ಭ ವಿಶ್ವ ಮಧುಮೇಹ ದಿನದ ಆಯೋಜನೆಯ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಎಂ ಸಿ ಎಸ್ ಕಲ್ಪವೃಕ್ಷ ಸಭಾಭವನದಲ್ಲಿ ನವೆಂಬರ್ 16ರಂದು ನಡೆಯಿತು. ಎಂಸಿಎಸ್ ಸೊಸೈಟಿಯ ಉಪಾಧ್ಯಕ್ಷ ಗಣೇಶ್ ನಾಯಕ್ ದೀಪ ಬೆಳಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಕಿವಿ ಮೂಗು ಗಂಟಲು ತಜ್ಞ ಡಾಕ್ಟರ್ ಮಹಾವೀರ ಜೈನ್, ಮಧುಮೇಹದ ಬಗ್ಗೆ ಮಾಹಿತಿಯನ್ನು ಡಾ. ಪ್ರಣಮ್ಯ ಜೈನ್ ನೀಡಿದರು.
ಶಿಬಿರದಲ್ಲಿ ಉಚಿತ ಹೃದಯ ತಪಾಸಣೆ, ಮಧುಮೇಹ ರಕ್ತ ಪರೀಕ್ಷೆ, ಬ್ಲಡ್ ಪ್ರೆಷರ್, ಈ ಎನ್ ಟಿ ಚಕಪ್ ಇತ್ಯಾದಿಗಳು ನಡೆದವು.
.

