ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ೨೦೨೫ರ ಮಾರ್ಚ್ ತಿಂಗಳು ೩೧ರವರೆಗೆ ರಾಜ್ಯ ಮಟ್ಟದ ಉಚಿತ ಸ್ವರಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಂಡಿತ್ತು. ರಾಜ್ಯದ ಹಲವಾರು ಜಿಲ್ಲೆಗಳಿಂದ ೧೯೭ ಕವನಗಳು ಬಂದಿದ್ದವು; ಬಹು ತುರುಸಿನ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಶಹರದ ಮಂಜುನಾಥ ನಗರದಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಾಹಿತಿ ಸುಭಾಷ್ ಹೇಮಣ್ಣಾ ಚವ್ಹಾಣ ಹಾಗೂ ಬೆಂಗಳೂರಿನ ಕವಯತ್ರಿ ಸೀತಾ ವ್ಯಾಸಮುದ್ರಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಹಿರಿಯ ಸಾಹಿತಿ, ಕವಯತ್ರಿ ಶ್ರೀಮತಿ ಕುಸುಮಾ ಲೋಕೇಶ್ ತಿಳಿಸಿದ್ದಾರೆ. ಪ್ರಥಮ ಬಹುಮಾನಗಳು ಧಾರವಾಡ ಜಿಲ್ಲೆಯ ಮಂಜುನಾಥ ನಗರದ ಸುಭಾಷ್ ಹೇಮಣ್ಣಾ ಚವಾಣ ಹಾಗೂ ಬೆಂಗಳೂರಿನ ಸೀತಾ ವ್ಯಾಸಮುದ್ರಿ ಪಡೆದರೆ, ದ್ವಿತೀಯ ಬಹುಮಾನಗಳು ಬೆಳಗಾವಿ ಜಿಲ್ಲೆಯ ರಾಯಭಾಗದ ಸಾಗರ ಝಂಡೆನ್ನವರ್, ತುಮಕೂರು ಜಿಲ್ಲೆಯ ಕುಣಿಗಲ್‌ನ ಕ. ಚ. ಕೃಷ್ಣಪ್ಪ, ತೃತೀಯ ಬಹುಮಾನಗಳು ಮೈಸೂರಿನ ಪ್ರಭಾ ಶಾಸ್ತ್ರಿ ಜೋಶ್ಯುಲ, ಶಿವಮೊಗ್ಗ ಜಿಲ್ಲೆಯ ಹೊಸನಗರದ ಲತಾ ಹೆಚ್. ಭಟ್ ಪಡೆದಿರುತ್ತಾರೆ. ಸಮಾಧಾನಕರ ಬಹುಮಾನಗಳು ದಾವಣಗೆರೆ ಜಿಲ್ಲೆಯ ನ್ಯಾಮತಿಯ ಕೃಷ್ಣನಾಯ್ಕ ಕೆ. ಕೊಡಗು ಜಿಲ್ಲೆಯ ಬಿಲ್ಲಮಾವಟಿಯ ಎಂ. ಡಿ. ಅಯ್ಯಪ್ಪ, ದಾವಣಗೆರೆಯ ಬಸವರಾಜಪ್ಪ ಡಿ. ಸಿ., ಮಂಗಳೂರಿನ ಡಾ. ಸುರೇಶ್ ನೆಗಳಗುಳಿ, ದಾವಣಗೆರೆಯ ಶ್ರೀಮತಿ ಕೋಮಲ ವಸಂತಕುಮಾರ್, ಧಾರವಾಡದ ಶ್ರೀಮತಿ ಸುಲೋಚನ ಮಾಲಿ ಪಾಟೀಲ್, ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವೆಂಕಟೇಶ್ ಬೈಲೂರು, ರಾಯಚೂರು ಜಿಲ್ಲೆಯ ಮಾಡಗಿರಿಯ ರಾಮಲಿಂಗ, ಉಡುಪಿಯ ಶ್ರೀಮತಿ ಶುಭಲಕ್ಷ್ಮಿ ಆರ್.ನಾಯಕ್ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಸುಹೇಚ ಎಂಬ ಕಾವ್ಯನಾಮದಿಂದ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಸುಭಾಷರವರು ನೂರಾರು ಜಿಲ್ಲಾ ರಾಜ್ಯಮಟ್ಟದ ಸ್ವರಚಿತ ಕವನ ಸ್ಪರ್ಧೆಗಳಲ್ಲಿ, ಆನ್ಲೈನ್ ಕವನ ಸ್ಪರ್ಧೆಗಳಲ್ಲಿ ಪ್ರಥಮ ದ್ವೀತಿಯ ಹಾಗೂ ಉತ್ತಮ ಅತ್ಯುತ್ತಮ ಸ್ಥಾನ ಪಡೆದು ಕಾವ್ಯಾಸ್ವಾದಕರ ಮನ ಗೆದ್ದಿರುವ ಸುಭಾಷರವರು ಮಂಗಳೂರಿನ ಸಾಹಿತ್ಯ ಚಿಗುರು ಬಳಗ ಏರ್ಪಡಿಸಿದ್ದ ರಾಜ್ಯಮಟ್ಟದ ಆಶುಕವನ ರಚನೆಯಲ್ಲಿ ಸತತವಾಗಿ ೩ಸಲ ಅಗ್ರಗಣ್ಯರಾಗಿ ಚಿನ್ನದ ನಾಣ್ಯ, ಬೆಳ್ಳಿ ಪದಕ ಪಡೆದು ಸ್ವರ್ಣ ಕವಿ, ರಜತಕವಿ ಎಂಬ ಅಭಿದಾಕ್ಕೆ ಪಾತ್ರರಾಗಿದ್ದಾರೆ. ಗಜಲ್, ಆಧುನಿಕ ವಚನ, ಟಂಕಾ, ಹೈಕು, ಶಿಶು ಕವನ, ಚುಟುಕು, ರುಬಾಯಿ ಕಾವ್ಯದ ಹಲವಾರು ಪ್ರಕಾರಗಳಲ್ಲಿ ಸಾವಿರಾರು ಕವನಗಳನ್ನು ಬರೆದಿರುವ ಇವರು ದಾವಣಗೆರೆಯ ಕಲಾಕುಂಚ ೨೦೨೫ ಮಾರ್ಚ ತಿಂಗಳಲ್ಲಿ ಏರ್ಪಡಿಸಿದ್ದ ಯುಗಾದಿ ಹಬ್ಬದ ಕುರಿತ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಕಾವ್ಯ ಆಸಕ್ತರ ಮನದಲ್ಲಿ ಸಂಭ್ರಮ ತಂದಿದೆ. ‘ಜಗವೆಲ್ಲ ನಗುತಿರಲಿ’, ‘ಸೌಹಾರ್ದ ಸೇತು ಬಂಧ’ ಕಾವ್ಯದಾಶಯದ ಸೌಹಾರ್ದ ಕವಿ ಸುಹೇಚರವರು ಬರೆದ ‘ಯುಗಾದಿ ಸಂಭ್ರಮ’ ಕವನ ನಿರ್ಣಾಯಕರ ಗಮನ ಸೆಳೆದಿದ್ದು; ಕಾವ್ಯ ಲೋಕದಲ್ಲಿ ನೆಲೆ ನಿಲ್ಲುವಂತ ಶಕ್ತಿಯನ್ನು ಹೊಂದಿದೆ ಎಂದು ಆಯೋಜಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿಜೇತರಾದ ಕವಿ ಸುಹೇಚ ಆದಿಯಾಗಿ ಎಲ್ಲ ಕವಿ ಕವಯತ್ರಿಯರಿಗೂ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ. ಬಹುಮಾನಿತರಿಗೆ ವರ್ಣರಂಜಿತ ಅಭಿನಂದನಾಪತ್ರ ಹಾಗೂ ‘ಕಲಾ ಕುಂಚ’ ಭಾಗ ೫ ಸಂಪಾದಿತ ಕವನ ಸಂಕಲನ, ತಾಯಿ ಭುವನೇಶ್ವರಿ ಸ್ಮರಣಿಕೆವನ್ನು ಉಡುಗೊರೆಯಾಗಿ ಅಂಚೆ ಮೂಲಕ ಕಳಿಸಿಕೊಡುವುದಾಗಿ ಪತ್ರಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಾಜ್ಯ ಮಟ್ಟದ ಯುಗಾದಿ ಕವನ ಸ್ಪರ್ಧೆಯಲ್ಲಿ ಸೌಹಾರ್ದ ಕವಿ ಸುಹೇಚಗೆ ಪ್ರಥಮ ಸ್ಥಾನ
RELATED ARTICLES