ಕೃಷ್ಣ ಮಠದಲ್ಲಿ ಗಣೇಶ ವಿಗ್ರಹ ವಿಸರ್ಜನೆ

0
9


ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರುಮಠ ಆಶ್ರಯದಲ್ಲಿ ಬಾದ್ರಪದ ಚತುರ್ಥಿಯಿಂದ ಮೂರು ದಿನಗಳ ಕಾಲ ಪೂಜಿಸಿದ ಗಣೇಶ ವಿಗ್ರಹವನ್ನು ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಜಲಸ್ಥಂಭನ ಮೆರವಣಿಗೆ ನಡೆಸಲಾಯಿತು.

ಈ ಮೆರವಣಿಗೆಯಲ್ಲಿ ಶ್ರೀ ಮಠದ ದಿವಾನರಾದ ಉದಯಕುಮಾರ ಸರಳತ್ತಾಯ,ಪಾರುಪತ್ಯೆದಾರರಾದ ಶ್ರೀಶ ಭಟ್ ಕಡೆಕಾರು ಹಾಗೂ ಮಠದ ಸಿಬ್ಬಂದಿಗಳು ಪಾಲ್ಗೊಂಡರು.ಮೆರವಣಿಗೆಯ ನಂತರ ಮಧ್ವಸರೋವರದಲ್ಲಿ ಭಕ್ತಜನರ ಸಮ್ಮುಖದಲ್ಲಿ ಜಲಸ್ಥಂಭನಗೊಳಿಸಲಾಯಿತು.