ಮಹಾರಾಷ್ಟ್ರದಲ್ಲಿ ಉಮೇಶ ಮೇಸ್ತ ಶಿರೂರು ಬಳಗದವರಿಂದ ‘ಗಣಪತಿ ಬಪ್ಪ ಮರಾಠಿ ಭಜನಾಮೃತ’

0
10

ಶಿರೂರು : 21 ದಿನಗಳ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ಮಹಾರಾಷ್ಟ್ರದ ಶ್ರೀ ಮಹೇಶ ಸಾವಂತ ಹಾಗೂ ಕುಟುಂಬದವರ ಮನೆಯಲ್ಲಿ ವಿಶೇಷ ‘ಗಣಪತಿ ಬಪ್ಪ ಮರಾಠಿ ಭಜನಾಮೃತ’ ಭಕ್ತಿಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆಪ್ಟೆಂಬರ್ 29ರಂದು ಮಂಗಳವಾರ, ಅಂಗಾರಕ ಸಂಕಷ್ಟಿಯಂದು, ಉಡುಪಿಯ ಖ್ಯಾತ ಗಾಯಕ ಉಮೇಶ ಶಿರೂರು ಹಾಗೂ ಬಳಗದವರಿಂದ ಭಕ್ತಿಗೀತೆ ಮತ್ತು ಮರಾಠಿ ಭಜನಾ ಕಾರ್ಯಕ್ರಮ ನಡೆಯಲಿದೆ.

ಗಣಪತಿ ಆರಾಧನೆಯೊಂದಿಗೆ ಸಂಗೀತದ ಮೂಲಕ ಭಕ್ತಿಭಾವವನ್ನು ಪಸರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಭಕ್ತಿಗೀತೆಗಳು ಹಾಗೂ ಭಜನೆಗಳ ಮೂಲಕ ಗಣೇಶನಿಗೆ ಸಂಗೀತ ಸೇವೆ ಸಲ್ಲಿಸಲಾಗುವುದು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ‘ಗಣಪತಿ ಬಪ್ಪ ಮರಾಠಿ ಭಜನಾಮೃತ’ ಕಾರ್ಯಕ್ರಮದ ಭಕ್ತಿಸಂಗೀತದ ಸವಿಯನ್ನು ಅನುಭವಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.