ಬೆಲೆ ಏರಿಕೆಯ ವಿರುದ್ದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ತೀವ್ರ ಖಂಡನೆ.
ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹991ಕ್ಕೆ ಏರಿಕೆ ಮಾಡಿರುವ ಕೇಂದ್ರ ರ‍್ಕಾರದ ಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ತೀವ್ರವಾಗಿ ಖಂಡಿಸಿದ್ದಾರೆ. ಚುನಾವಣೆಗಳು ಮುಗಿದ ತಕ್ಷಣ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿರುವುದು ಬಿಜೆಪಿ ಪಕ್ಷದ ನಿಜಸ್ವರೂಪವನ್ನು ಬಯಲಿಗೆಳೆದಿದೆ ಎಂದು ಅವರು ಆರೋಪಿಸಿದರು. ಚುನಾವಣೆ ಸಂರ‍್ಭದಲ್ಲಿ ಜನರ ಮತಗಳನ್ನು ಪಡೆಯಲು ಯಾವುದೇ ದರ ಏರಿಕೆ ಮಾಡದೆ, ಇದೀಗ ಮತ ಪಡೆದುಕೊಂಡ ನಂತರ ಜನರ ಮೇಲೆ ಬೆಲೆಭಾರ ಹಾಕಲಾಗುತ್ತಿದೆ ಇದು ಕರಾವಳಿ ಭಾಗದ ಜನರಿಗೆ ಮಾಡಿದ ದೊಡ್ಡ ಮೋಸ ಎಂದು ಐವನ್ ಡಿʼಸೋಜಾ ಖಂಡಿಸಿದ್ದಾರೆ.
ದೇಶದ ಬಡಜನರ ಕರ‍್ಮಿಕ ರ‍್ಗದ ಮೇಲೆ ಹೊರೆ ಹಾಕುವಂತಹ ನರ‍್ಧಾರ ಕೈಗೊಂಡಿರುವುದು ಅತ್ಯಂತ ಖಂಡನೀಯ. ಈಗಾಗಲೇ ಗ್ಯಾಸ್ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿದ ವೆಚ್ಚದಿಂದ ಅನೇಕ ಹೋಟೆಲ್‌ಗಳು ಹಾಗೂ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂರ‍್ಭದಲ್ಲಿ ಮತ್ತೆ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿರುವುದು ಜನವಿರೋಧಿ ನೀತಿಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು. ಬಿಜೆಪಿ ರ‍್ಕಾರದ ನಿಲುವು ಜನಪರವಾಗಿಲ್ಲ. ಮಧ್ಯಮ ರ‍್ಗ ಹಾಗೂ ಕೆಳರ‍್ಗದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ರ‍್ಕಾರ ನಿರಂತರವಾಗಿ ನಡೆದುಕೊಳ್ಳುತ್ತಿದೆ. ಜನಸಾಮಾನ್ಯರಿಗೆ ನೆರವಾಗುವ ಯಾವುದೇ ತರ‍್ಮಾನಗಳನ್ನು ಬಿಜೆಪಿ ಕೈಗೊಂಡಿಲ್ಲ ಎಂದು ಆರೋಪಿಸಿದರು. ಇತ್ತೀಚಿನ ಅವಧಿಯಲ್ಲಿ ದೇಶದ ರ‍್ಥಿಕ ಸ್ಥಿತಿ ಹದಗೆಡಲು ಕೇಂದ್ರ ರ‍್ಕಾರದ ತಪ್ಪು ನೀತಿಗಳೇ ಕಾರಣವಾಗಿವೆ.
ಅಧಿಕಾರಕ್ಕೆ ಬಂದಂತಹ ಬಿಜೆಪಿ 2025ರಲ್ಲಿ ಮಹಿಳಾ ಮೀಸಲಾತಿಯನ್ನು ದೇಶದಲ್ಲಿ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಬಿಜೆ.ಪಿ ಮಹಿಳಾ ಮಸೂದೆಯನ್ನು ಅಂಗೀಕರಿಸಿ, ಅನುಷ್ಠಾನಗೊಳಿಸಬೇಕೆಂದು ಆದೇಶ ನೀಡಿದರೂ, ಮತ್ತೊಮ್ಮೆ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅದರ ಜೊತೆಯಲ್ಲಿ ರಾಜಕೀಯ ಲಾಭದ ಉದ್ದೇಶದಿಂದ ಲೋಕಸಭಾ ಸ್ಥಾನಗಳ ನೆಪವನ್ನು ಒಡ್ಡಿ ಲೋಕಸಭೆ ಯಲ್ಲಿ ಪಾಸ್ ಮಾಡಲು ಶಕ್ತಿಯನ್ನು ಹೊಂದಿದ್ದರೂ ಮಸೂದೆ ಮಂಡಿಸಿ ಸೋಲನ್ನು ಅನುಭವಸಿದೆ ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನವಾಗಿದೆ. ಎಂದು ಐವನ್ ಡಿʼಸೋಜಾ ಟೀಕಿಸಿದರು.
ದೇಶದಲ್ಲಿ ಜನಪರವಾಗಿ ಕೆಲಸವನ್ನು ಮಾಡದೇ ಬಿಜೆಪಿ ಅಧಿಕಾರಕ್ಕೆ ಬರುವಂತಹ ಸಂರ‍್ಭದಲ್ಲಿ ಜನರಿಗೆ ೧೫.೦೦ಲಕ್ಷ ರೂ ಕೊಡುವ ಅಸೆ ತೋರಿಸಿ ಪೆಟ್ರೋಲ್ ಡಿಸೇಲ್ ನ ದರ ಏರಿಕೆ ಮಾಡಿ ಈ ಏರಿಕೆಯಿಂದ ಆಟೋ ಚಾಲಕರು, ಕರ‍್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮಿಗಳು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ. ದಿನನಿತ್ಯದ ಜೀವನ ಸಾಗಿಸುವುದು ಕಷ್ಟಕರವಾಗಲಿದೆ ಎಂದು ಹೇಳಿದರು.
ಮಹಿಳಾ ಮಸೂದೆ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿ ಜನರಿಗೆ ಭರವಸೆ ನೀಡಿ ನಂತರ ಅದನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ರ‍್ಕಾರದ ಕರ‍್ಯಕ್ರಮಗಳು ಜನಪರವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು. ಯಾವುದೇ ಜನಪರ ಕೆಲಸ ಮಾಡಿಲ್ಲ ಬಿಜೆಪಿ ಜನ ವಿರೋಧಿ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಧರ್ಮದ- ಜಾತಿಯ ಆಧಾರದಲ್ಲಿ ಆಧಾರದಲ್ಲಿ ಜನರನ್ನು ಒಡೆಯುವಂತಹ ಕೆಲಸವನ್ನು ಮಾಡುತ್ತಿದೆ.ಪ್ರಸ್ತುತ ಏರಿರುವ ಈ ಗ್ಯಾಸ್ ದರ ಏರಿಕೆ ಕುರಿತು ಬಿಜೆಪಿ ನಾಯಕರು ಕೂಡಲೇ ಉತ್ತರ ನೀಡಬೇಕು ಬಿಜೆಪಿ ನಾಯಕರು ಎಲ್ಲಿ ಅಡಗಿದ್ದಾರೆ ಎಂದು ಜನರಿಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಐವಾನ್ ಡಿಸೋಜಾ ಎಚ್ಚರಿಸಿದ್ದಾರೆ.
