ಪಡುಬಿದ್ರೆ : ಸ್ಥಾನಿಕ ನಿಕ ಬ್ರಾಹ್ಮಣ ಸಭಾದ ಮಹಾ ಸಭೆ ಜುಲೈ 12ರಂದು ಬಾಲ ಗಣಪತಿ ಪ್ರಸನ್ನ ಪಾರ್ವತಿ ದೇವಾಲಯದ ಸಭಾಮಂದಿರದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಐ ಲಕ್ಷ್ಮಿಕಾಂತ್ ರಾವ್ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಎಂ ಕೆ ಮೋಹನ್ ರಾವ್, ಗೌರವ ಸನ್ಮಾನವನ್ನು ಸ್ವೀಕರಿಸುವ ಮಹಾಮಂಡಲದ ಸ್ಥಾಪಕ ಅಧ್ಯಕ್ಷ ಸಿ ಎಸ್ ರಾವ್, ಸಾಧಕ ಸನ್ಮಾನವನ್ನು ಪಡೆಯುತ್ತಿರುವ ಅನಂತ ರಾಮರಾವ್, ಮುಖ್ಯ ಅತಿಥಿ ಉಡುಪಿ ಸಂಘದ ಅಧ್ಯಕ್ಷ ಗಣೇಶ ಹೆಬ್ಬಾರ್, ವಿವಿಧ ಸಂಘಗಳ ಅಧ್ಯಕ್ಷರುಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ಪ್ರೋತ್ಸಾಧನ ವಿತರಣಾ ಕಾರ್ಯಕ್ರಮವು ಜರಗಿತು.
.
ವರದಿ ರಾಯಿ ರಾಜ ಕುಮಾರ್
.

