ಹದಿಮೂರು ಸಾವಿರ ಸದಸ್ಯರು : 23 ಕೋಟಿ ಬಂಡವಾಳ
ಮೂಡುಬಿದಿರೆ ಕೋಪರೇಟಿವ್ ಸರ್ವಿಸ್ ಸೊಸೈಟಿಯ ವಾರ್ಷಿಕ ಮಹಾಸಭೆ ಜುಲೈ 26ರಂದು ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಸಹಕಾರ ರತ್ನ ಎಂಬ ಬಾಹುಬಲಿ ಪ್ರಸಾದ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸೋಲಾರ್ ಲೈಟ್ ಇತ್ಯಾದಿಗಳಿಗೆ ಸಾಲ, ರೈತರಿಗೆ ಯಾವುದೇ ಯಂತ್ರ ಖರೀದಿಗೆ ಬಡ್ಡಿ ರಹಿತ ಸಾಲ, ರೈತರು 60 ವರ್ಷಕ್ಕೆ ಮೊದಲು ರೂ 60,000 ಕಟ್ಟಿದಲ್ಲಿ ಸೊಸೈಟಿಯಿಂದ ರೂ 60,000 ಸೇರಿಸಿ ಪ್ರತಿ ತಿಂಗಳು ಬದುಕಿರುವ ತನಕ ಒಂದು ಸಾವಿರದಂತೆ ಪಿಂಚಣಿ ಸೌಲಭ್ಯ ಗಳ ಪ್ರಕಟಣೆಯನ್ನು ಗೈದರು. ಮುಂದೆ ಸೊಸೈಟಿ ಕಾರ್ಮಿಕರಿಗೂ ಪಿಂಚಣಿ ಸೌಲಭ್ಯವನ್ನು ಒದಗಿಸುವ ಯೋಜನೆ ಇದೆ ಎಂದು ತಿಳಿಸಿದರು.

ಬಡತನದಲ್ಲಿದ್ದು ಅರ್ಜಿ ನೀಡಿದ ಪ್ರತಿಯೊಬ್ಬರಿಗೂ ಅವಶ್ಯಕತೆಯನ್ನು ಆಧರಿಸಿ ಕೃಷಿ ಸಾಲ, ಉದ್ದಿಮೆ ಸಾಲ, ಮನೆ ಸಾಲ, ವಾಹನ ಸಾಲ, ವಿದ್ಯಾಭ್ಯಾಸ ಸಾಲ, ಉಪಯೋಗಿ ವಸ್ತುಗಳ ಸಾಲ, ಮದುವೆ ಸಾಲ, ಜಮೀನು ಖರೀದಿಸಲು ಸಾಲ, ಸ್ವಉದ್ಯೋಗ ಸಾಲ ಇತ್ಯಾದಿ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ಭಟ್ ವಾರ್ಷಿಕ ವರದಿಯನ್ನು ಮಂಡಿಸಿದರು. 13,000 ಸದಸ್ಯರ 22. 75 ಕೋಟಿ ಪಾಲು ಬಂಡವಾಳ ಹೊಂದಿದೆ. 572.71 ಕೋಟಿ ಠೇವಣಿಯನ್ನು ಹೊಂದಿದ್ದೆ. 625.90 ಕೋಟಿ ಸದಸ್ಯರ ಸಾಲ ಹೊರಬಾಕಿ ಇದೆ. 96 ಶೇಕಡ ಸಾಲ ವಸೂಲಾತಿ ಆಗಿರುತ್ತದೆ. ಸೊಸೈಟಿ 68.0.63 ಕೋಟಿ ಆದಾಯ ಗಳಿಸಿದೆ. 25 ಶೇಕಡ ಡಿವಿಡೆಂಡ್ ನೀಡುತ್ತಿದೆ. 25 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ವಿವಿಧ ಅಧಿಕಾರಿ ವರ್ಗದವರು ಆಗಾಗ ಪರೀಕ್ಷಣೆ ನಡೆಸುತ್ತಿದ್ದಾರೆ.
ಕಲ್ಪವೃಕ್ಷ ಆರೋಗ್ಯ ವಿಮಾ ಯೋಜನೆ, ವಿವಿಧ ಚಿಕಿತ್ಸೆಗಳಿಗೆ ಬಡವರಿಗೆ ನೆರವು, ಡಯಾಲಿಸಿಸ್ ಸೌಲಭ್ಯ, ಮಳೆ ಕೊಯ್ಲು ಯೋಜನೆ, ರೈತರ ಪಿಂಚಣಿ ಯೋಜನೆ, ಬ್ಯಾಂಕಿಂದ ನೌಕರರಿಗೆ ಪಿಂಚಣಿ ಯೋಜನೆ, ಇಖ್ಯಾದಿಗಳ ವಿವರವನ್ನು ಒದಗಿಸಿದರು.

ಕಾರ್ಯದರ್ಶಿ ಸುಜಾತ ಎಸ್ ನೋಟಿಸ್ ಅನ್ನು ಓದಿ ರೆಕಾರ್ಡ್ ಮಾಡಿದರು. ಸಂತೋಷ್ ನಾಯ್ಕ್ ಲೆಕ್ಕಪರಿಶೋಧನ ವರದಿ ಮಂಡಿಸಿದರು. ವಾಸುದೇವ ಭಟ್ ನಿವಳ ಲಾಭದ ವಿಂಗಡಣೆಯನ್ನು ಪ್ರಸ್ತುತಪಡಿಸಿದರು. ಮುಂದಿನ ಸಾಲಿನ ಬಜೆಟ್ ಅನ್ನು ಸುದರ್ಶನ್ ಮಂಡಿಸಿದರು. ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಕಾರ್ಯಕ್ರಮ ನಿರ್ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ವಿಶೇಷ ವೆಬ್ಸೈಟ್ ಲೋಕಾರ್ಪಣೆಗೊಂಡಿತು. ಮಾಜಿ ಸಚಿವ ಅಭಯ ಚಂದ್ರ ಜೈನ್ ಶುಭನುಡಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಸಿ ಎಚ್ ಅಬ್ದುಲ್ ಗಫೂರ್, ಮನೋಜ್ ಶೆಟ್ಟಿ, ಎಂ ಪಿ ಅಶೋಕ್ ಕಾಮತ್, ಜ್ಞಾನೇಶ್ವರ ಕಾಳಿಂಗ ಪೈ, ಎಂ ಪದ್ಮನಾಭ, ಪ್ರೇಮ ಎಸ್ ಸಾಲಿಯಾನ, ಅನಿತಾ ಪಿ ಶೆಟ್ಟಿ, ಹಾಜರಿದ್ದರು.
ಹೆರಾಲ್ಡ್ ತೌರೋ ಪ್ರಾರ್ಥಿಸಿದರು. ನಿರ್ದೇಶಕ ಜಯರಾಮ್ ಕೋಟ್ಯಾನ್ ಸ್ವಾಗತಿಸಿದರು. ಆಶಾಲತಾ, ಭಾಸ್ಕರ್ ಸನಿಲ್, ಮಂಜುನಾಥ ಎಸ್, ರಂಜಿತ್ ಟಿ, ರೇಷ್ಮಾ ಭಟ್, ಸ್ವರಾಜ್ ಪಾಲ್, ಪ್ರಜ್ವಲ್, ಚೈತ್ರಾಕ್ಷಿ, ನಾಗೇಶ, ಶೇಖರ ದೇವಾಡಿಗ, ಸಂತೋಷ ಎಂ, ಅರುಣ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಉಪಾಧ್ಯಕ್ಷ ಗಣೇಶ್ ನಾಯಕ್ ವಂದಿಸಿದರು.
ವರದಿ ರಾಯಿ ರಾಜ ಕುಮಾರ್

